ಕ್ರಾಂತಿ ಕಾರಿ ಜನಪದ ಗಾಯಕ, ಹೋರಾಟಗಾರ ಆಂಧ್ರದ ಗದ್ದರ್ ಕಣ್ಮರೆ

ಹೈದ್ರಾಬಾದ್, ಕೆಲ ದಿನಗಳಿಂದ ಹೈದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಆಂಧ್ರದ ಕವಿ, ಜನಪದ ಗಾಯಕ ಹೋರಾಟಗಾರ ಗದ್ದರ್ ಅವರು ಇಂದು ಹೈದ್ರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆಂಧ್ರಪ್ರದೇಶದ ಮೇದರ ಜಿಲ್ಲೆಯ ತೊಪರಾನ ಗ್ರಾಮದಲ್ಲಿ 1949ರಲ್ಲಿ ಜನಸಿದ್ದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್ ಬಡತನದಲ್ಲಿಯೇ ಬಾಲ್ಯಗಳನ್ನು ಕಳೆದ ಗದ್ದರ್ ನಿಜಾಮಾಬಾದ್ ನಲ್ಲಿ ಶಿಕ್ಷಣ ಮುಗಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವತಃ ಹಾಡು ಬರೆದು ಹಾಡುತ್ತಿದ್ದರು, ಹಲವಾರು ಸಿನೇಮಾಗಳಲ್ಲಿ ಕೂಡ ನಟಿಸಿದ್ದರು. ಸಾಮಾಜಿಕ ಹೋರಾಟದಲ್ಲಿ ಹೆಸರು ಮಾಡಿದ್ದ ಗದ್ದರ್ ಇನ್ನೂ ನೆನಪು ಮಾತ್ರ.

Share this :