ಮಹಾಲಕ್ಶ್ಮೀಲೇಔಟ್ ವಿಧಾನಸಭಾ ಕ್ಷೇತ್ರ ,ಶಂಕರಮಠ ವಾರ್ಡ್ ನಲ್ಲಿ ಬಿ.ಬಿ.ಎಂ.ಪಿ.ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ನು ಸ್ಥಳೀಯ ಶಾಸಕರು ,ಅಬಕಾರಿ ಸಚಿವರಾದ ಕೆ.ಗೋಪಾಲಯ್ಯರವರು ಉದ್ಘಾಟನೆ ನೇರವೆರಿಸಿದರು.
ಸ್ಥಳೀಯ ಬಿ.ಜೆ.ಪಿ.ಮುಖಂಡರಾದ ಜಯರಾಮಣ್ಣ ,ಶ್ರೀನಿವಾಸಗೌಡ ,ಜಯಸಿಂಹ ನಿಸರ್ಗ ಜಗದೀಶ್ ಮತ್ತು ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ ,ನೋಡಲ್ ಅಧಿಕಾರಿ ಸುರೇಶ್ ಲಿಂಗಯ್ಯ ,ಸಹಾಯಕ ಕಾರ್ಯಪಾಲಕ ಅಭಿಯಂತರಾದ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಸಚಿವ ಕೆ.ಗೋಪಾಲಯ್ಯರವರ ಮಾತನಾಡಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ ಅದ್ದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಲಭಿಸುವಂತೆ ಮಾಡಲು ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು .
ಶಂಕರಮಠ ವಾರ್ಡ್ನನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕ್ಕರೆ ಖಾಯಿಲೆ ,ಬಿ.ಪಿ.ಮತ್ತು ಜನರಲ್ ಚಕ್ ಆಪ್ ಮಾಡಲಾಗುವುದು ವಿಶೇಷವಾಗಿ ಗರ್ಭಿಣಿ ಸ್ತೃೀಯರ ತಪಾಸಣೆ ,ಮಗುವಿನ ಬೆಳವಣಿಗೆ ತಪಾಸಣೆ ಮಾಡಲಾಗುತ್ತದೆ .
ಪ್ರತಿಯೊಬ್ಬ ನಾಗರಿಕರು ಪ್ರತಿ ಆರು ತಿಂಗಳಿಗೆ ಸಂಪೂರ್ಣ ದೇಹ ತಪಾಸಣೆ ಮಾಡಿಸಿಕೊಳ್ಳಿ ಏನಾದರು ಸಮಸ್ಯೆಗಳು ಇದ್ದರೆ ವೈದ್ಯರ ಸಲಹೆ ಪಡೆಯಿರಿ ಎಂದು ಹೇಳಿದರು.