ಬೆಂಗಳೂರು, ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರರವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ.
ವಿಜಯ್ ಪತ್ನಿ ಸ್ಪಂದನಾ ಅವರು ಇತ್ತೀಚಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತವಾಗಿದೆ. ಅಪ್ಪು ನಿಧನದ ಶಾಕ್ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.
ನಾಳೆ ಬೆಂಗಳೂರಿಗೆ ವಿಜಯ್ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಆಫೀಸರ್ ಬಿ.ಕೆ ಶಿವರಾಮ್ ಅವರ ಪುತ್ರಿ ಸ್ಪಂದನಾ ಅವರು ವಿಜಯ್ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಓರ್ವ ಮಗನಿದ್ದಾನೆ
ಡಾ ರಾಜ್ಕುಮಾರ್ ಕುಟುಂಬಕ್ಕೆ ಮತ್ತೊಂದು ಆಘಾತ
ಡಾ ರಾಜ್ಕುಮಾರ್ ಕುಟುಂಬದಲ್ಲಿ ಒಂದಾದ ಮೇಲೊಂದು ಆಘಾತಗಳು ಎದುರಾಗುತ್ತಿವೆ. 2021ರ ಅಕ್ಟೋಬರ್ 29ರಂದು ನಟ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕೆಲ ತಿಂಗಳ ಹಿಂದೆ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಶ್ರೀನಿವಾಸ್ ಪತ್ರ ಧ್ರುವನ್ಗೆ ಅಪಘಾತವಾಗಿ ಕಾಲನ್ನು ಕತ್ತರಿಸಲಾಗಿದೆ. ಇದೀಗ ಪಾರ್ವತಮ್ಮ ರಾಜ್ಕುಮಾರ್ ಅವರ ಮತ್ತೋರ್ವ ಸಹೋದರ ಎಸ್ ಎ ಚಿನ್ನೇಗೌಡ ಅವರ ಸೊಸೆ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿರುವುದು ದುರದೃಷ್ಟಕರ.

Share this :