ಹಂಪಿಗೆ ಮತ್ತೊಂದು ಪ್ರಶಸ್ತಿಯ ವಿಶೇಷ ಗರಿ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ನೀಡುವ “ಪ್ರವಾಸಿ ಗ್ರಾಮ ಪ್ರಶಸ್ತಿ” ಯು ನಮ್ಮ ಹಂಪಿ ಗ್ರಾಮಕ್ಕೆ ದೊರೆತದ್ದು ಅತ್ಯಂತ ಖುಷಿಯ ಸಂಗತಿ. ಕಳೆದ ವಾರವಷ್ಟೇ ಹೊಯ್ಸಳರ ಕಾಲದ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದವು,

ಈಗ ಹಂಪಿ ಗ್ರಾಮವು ಉತ್ತಮ ಪ್ರವಾಸಿ ಗ್ರಾಮವಾಗಿ ಗುರುತಿಸಲ್ಪಟ್ಟಿರುವುದರಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ಮತ್ತು ಉತ್ತೇಜನ ನೀಡುತ್ತದೆ.

ಕರ್ನಾಟಕ ಎಂದರೆ ಐತಿಹಾಸಿಕ ಪ್ರವಾಸಿಗಳ ತಾಣ. ಈ ತಾಣಗಳು ಸೌಂದರ್ಯಕ್ಕೆ ಭೂಷಣ ಎಂದು  ಸಣ್ಣ ನೀರಾವರಿ ಸಚಿವರಾದ  ಎನ್ ಎಸ್ ಭೋಸರಾಜ್ ರವರು ಹರ್ಷ ವ್ಯಕ್ತ ಪಡಿಸಿದ್ದಾರೆ.

Share this :