ಸಂಪರ್ಕಿಸಿ
M S Bhaskar
Advisor
Managing Editor
ಗಡಿನುಡಿ ಅಂತರ್ ಜಾಲದ ವಿಭಾಗವು ನಮ್ಮ ನಾಡಿನ ಗಡಿಭಾಗದ ಸುದ್ದಿ, ಸಮಸ್ಯೆಗಳ ಸವಿವರಗಳನ್ನು ಈ ಪುಟದ ಮೂಲಕ ತಮ್ಮೆಲ್ಲರಿಗೂ ತಲುಪಿಸುವ ಮಹತ್ತರವಾದ ಹಂಬಲದೊಂದಿಗೆ ಈ ಕೆಲಸಕ್ಕೆ ಕೈ ಹಾಕಿದ್ದೇವೆ. ಈ ಶುಭ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.
ಕಳೆದ 2001ರಲ್ಲಿ ನಮ್ಮ ಗಡಿಎಕ್ಸ್ ಪ್ರೆಸ್ ವಾರ ಪತ್ರಿಕೆಯಾಗಿ ಬೆಳಗಾವಿಯಿಂದ ಪ್ರಕಟಗೊಳ್ಳುತ್ತಿತ್ತು. ಅಲ್ಲಿ ಕೆಲ ವರ್ಷಗಳ ಕಾಲ ಸೇವೆಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ 2007 ರಲ್ಲಿ ಬೆಂಗಳೂರಿನಿಂದ ಮಾಸಿಕವಾಗಿ ಇಡೀ ರಾಜ್ಯದ ಗಡಿಭಾಗದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿ ಯಿಂದ ಪ್ರಾರಂಭಗೊಂಡ ನಮ್ಮ ವಾರ ಪತ್ರಿಕೆಯು ಇಂದು ವಿಜಯಪುರ, ಬೀದರ್, ಕಲ್ಬುರ್ಗಿ, ರಾಯಚೂರು, ಕಾರವಾರ, ಮಂಗಳೂರು, ಕಾಸರಗೂಡು, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು, ಕೋಲಾರ ಮುಂತಾದ ಕಡೆಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದೆ.
ನಾವು ಗಡಿಭಾಗದ ಸುದ್ದಿ ಸಮಾಚಾರಗಳನ್ನು ಸಂಗ್ರಹಿಸಿ ಇಷ್ಟು ದಿನ ತಿಂಗಳಿಗೊಮ್ಮೆ ತಮಗೆ ತಲುಪಿಸುತ್ತಿದ್ದೇವು ಆದರೆ ಈಗ ಪ್ರತಿ ದಿನ | ಪ್ರತಿ ವಾರ | ತಮ್ಮೆಲ್ಲರಿಗೂ ಅಂತರ ಜಾಲದ ಮುಖಾಂತರ ಸ್ಪಷ್ಟವಾಗಿ, ಅಂದವಾಗಿ ಮತ್ತು ತ್ವರಿತವಾಗಿ ತಲುಪಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದೇವೆ.
ಅದರಂತೆ ಕನ್ನಡ-ಭಾಷೆ-ನೆಲ-ಜಲ ಹಾಗು ಗಡಿ ಭಾಗಕ್ಕೆ ಸಂಬಂಧಿಸಿದ ಮಹತ್ತರ ವಿಷಯಗಳನ್ನು ದಾಖಲಿಸಿ ಸರ್ವರಿಗೂ ಹಂಚಿಕೆ ಮಾಡುವ ಮಹದಾಸೆ ಈ ವ್ಯವಸ್ಥೆಯಿಂದ ಆಗಲಿದೆ.
ಈ ಹಿಂದೆ ಸತತವಾಗಿ ನಮ್ಮ ಗಡಿಎಕ್ಸ್ ಪ್ರೆಸ್ ತಂಡದಿಂದ ಹಲವಾರು ವಿಶೇಷ ಸಂಚಿಕೆಗಳನ್ನು ಪ್ರಕಟಿಸುತ್ತ ಬಂದಿದ್ದೇವೆ. ನಮ್ಮ ಕಾಳಜಿ ಹೆಚ್ಚಿನದ್ದು ಕೇವಲ ಗಡಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಿಂದಲೂ ಕೂಡ ಹಲವಾರು ಹೋರಾಟಗಳಿಗೆ ನಮ್ಮ ಪತ್ರಿಕೆ ಸಹಕಾರ ನೀಡುತ್ತ ಬಂದಿದೆ.
#Shanti Kuteer, Chaturved Building,
7th Cross, Jai Maruthinagar Lyt
Heggadadevanapura, Aluru Post,
Bengaluru – 562 123