ಬೆಳಗಾವಿಯಲ್ಲಿ  ಶ್ರೀ ಕೆ ವಿ ಪ್ರಭಾಕರ್ ಅವರಿಗೆ ಅಭಿಮಾನದ ಅಭಿನಂದನೆ ಸಮಾರಂಭ

ಬೆಳಗಾವಿಯಲ್ಲಿ ಶ್ರೀ ಕೆ ವಿ ಪ್ರಭಾಕರ್ ಅವರಿಗೆ ಅಭಿಮಾನದ ಅಭಿನಂದನೆ ಸಮಾರಂಭ

ಬೆಳಗಾವಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ್ ಅವರಿಗೆ ಅಭಿಮಾನದ ಅಭಿನಂದನೆ ಸಮಾರಂಭ.
ಬೆಳಗಾವಿ, 10, ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ್ ರವರನ್ನು ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗಿರೀಶ್ ಕೋಟೆ, ಶ್ರೀ ಕೆ ಪಿ ಪುಟ್ಟಸ್ವಾಮಯ್ಯ, ಶ್ರೀ ಕೆ ಎಸ್ ನಾಗರಾಜ್, ಶ್ರೀ ದೀಪಕ ಕರಾಡೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವವರ ಮಾಧ್ಯಮ ಸಲಹೆಗಾರರಾದ ಶ್ರೀ ಎಂ ಕೆ ಹೆಗಡೆಯವರನ್ನೂ ಕೂಡ, ಮಾಧ್ಯಮ ಕ್ಷೇತ್ರದಲ್ಲಿ ಗಣಣೀಯ ಸೇವೆ ಸಲ್ಲಿಸಿ ಈಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಬೆಳಗಾವಿ ಪತ್ರಕರ್ತರಿಂದ ಅಭಿಮಾನದ ಅಭಿನಂದನೆ ಜರುಗಲಿದೆ.
ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲೆಯ ಘಟಕ ಮತ್ತು ವಿವಿಧ ಪತ್ರಿಕಾ ಸಂಘಗಳಿಂದ ಬೆಳಗಾವಿ ನಗರದಲ್ಲಿ ಶನಿವಾರ, ದಿನಾಂಕ 11-11-2023ರಂದು ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರಂಭವು ಜಗದ್ಗುರುಗಳಾದ ಡಾ|| ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀ ಲಕ್ಷ್ಮೀ ಹೆಬ್ಬಾಳಕರ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಭೀಮಶಿ ಜಾರಕಿಹೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಆಸೀಫ್ (ರಾಜು) ಶೇಠ, ಶ್ರೀ ಅಭಯ ಪಾಟೀಲ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು, ಅತಿಥಿಗಳಾಗಿ ಶ್ರೀ ಬಿ ಸಿ ಲೋಕೇಶ್, ಶ್ರೀ ಎಚ್.ಬಿ.ಮದನಗೌಡ, ಶ್ರೀ ಪುಂಡಲೀಕ ಬಾಳೋಜಿ, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ, ನಗರ ಪೋಲಿಸ್ ಆಯುಕ್ತರಾದ ಶ್ರೀ ಎಸ್ ಎನ್ ಸಿದ್ದರಾಮಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಭೀಮಾಶಂಕರ್ ಗುಳೇದ, ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಗುರುನಾಥ್ ಕಡಬೂರು, ಶ್ರೀಮತಿ ಶುಭಾ ರತ್ನಾಯಕ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ದಿಲೀಪಕುಮಾರ್ ಕುರುಂದವಾಡೆ ಹಾಗೂ ಹಲವಾರು ಸಂಘ ಸಂಸ್ಥಗಳು ಮತ್ತು ಜಿಲ್ಲೆಯ ಪತ್ರಕರ್ತ ಮಿತ್ರರು ಭಾಗವಹಿಲಿದ್ದಾರೆ.
ಸಮಯ : ಬೆಳಿಗ್ಗೆ.11ಕ್ಕೆ,
ದಿನಾಂಕ : 11.11.2023, ಶನಿವಾರ., ಸ್ಥಳ : ಕನ್ನಡ ಭವನ, ನೆಹರು ನಗರ, ಬೆಳಗಾವಿ

ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಡಿಬಿಸಿ  ಅಸ್ತಂಗತ

ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಡಿಬಿಸಿ ಅಸ್ತಂಗತ

ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಡಿಬಿಸಿ ಅಸ್ತಂಗತ

ಬೆಂಗಳೂರು, – ಚಿಕ್ಕಮಗಳೂರು ರಾಜಕೀಯವನ್ನು ಇತಿಹಾಸದ ಪುಟಗಳಲ್ಲಿ ಸೇರುವಂತೆ ಮಾಡಿದವರಲ್ಲಿ ಡಿ.ಬಿ.ಚಂದ್ರೇಗೌಡರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. 1974ರಲ್ಲಿ ಲೋಕಸಭಾ ಸದಸ್ಯರಾದ ಗೌಡರು ರಾಜೀನಾಮೆ ನೀಡಿದ್ದರ ಫಲ ಶ್ರೀಮತಿ ಇಂದಿರಾಗಾಂಧಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪುನರ್ ಅಯ್ಕೆಯಾಗುತ್ತಾರೆ.
ಬುದ್ದಿವಂತ ಚಂದ್ರೇಗೌಡರು ದೇಶದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಪ್ರತಿನಿಧಿಸಿದ್ದ ಬುದ್ಧಿವಂತ ರಾಜಕಾರಣಿ ಜೊತೆಗೆ ಕಾಂಗ್ರೆಸ್, ಕ್ರಾಂತಿರಂಗ, ಜನತಾಪಕ್ಷ, ಭಾರತೀಯ ಜನತಾ ಪಕ್ಷ ಹೀಗೆ ಹಲವು ಪಕ್ಷಗಳಿಂದ ಸ್ಪರ್ಧೆ ಮಾಡಿದ್ದರು.
ಚಿಕ್ಕಮಗಳೂರು ಲೋಕಸಭೆ, ಬೆಂಗಳೂರು ಉತ್ತರ, ತೀರ್ಥಹಳ್ಳಿ ಮತ್ತು ಶೃಂಗೇರಿ ವಿಧಾನಸಭಾ ಕ್ಷೇತ್ರಗಳಿಂದ ಅಯ್ಕೆಯಾಗಿದ್ದವರು ಉತ್ತಮ ವಾಗ್ಮಿ ಯು ಹೌದು.ಚಂದ್ರೇಗೌಡರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪತ್ರಿಕೆ ಹಾರೈಸುತ್ತದೆ.

ಡ್ಯಾನ್ಸ್ ಸಿದ್ದು ಡಾನ್ಸ್

ವಿಶ್ವ ವಿಖ್ಯಾತ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಂದರ್ಭ.

ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರ್. ನವೆಂಬರ್ . 01.. ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಇಂದು ರವೀಂದ್ರ ಕಲಾಕ್ಷೇತ್ರ ದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ.* *ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ** ದಲ್ಲಿ ಭಾಗವಹಿಸಿ ಮಾತನಾಡಿದರು.