ದಾವಣಗರೆ: ಛತ್ತಿಸ್ಘಡ ರಾಜ್ಯದ ಬಿಲಯ್ ನಗರದಲ್ಲಿ ಆಗಸ್ಟ್ 25ರಿಂದ 28ರವರೆಗೆ ನಡೆದ 29ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಹಾಗು ಡೆಡ್ ಲಿಫ್ಟಿಂಗ್ ಸ್ಪರ್ಧೆಗಳು ಪುರುಷರ, ಮಹಿಳೆಯರ ಹಾಗು ಮಾಸ್ಟರ್ಸ್ ವಿಭಾಗದಲ್ಲಿ ನಡೆದಿದ್ದವು.
ಈ ಸ್ಪರ್ದೆಗಳಲ್ಲಿ ಹರಿಹರ ಬ್ರದರ್ಸ್ ಜಿಮ್ನಿಂದ 4 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 59 ಕೆಜಿ ವಿಭಾಗದಲ್ಲಿ ಖಾಜ ಮೋಹಿನೋದ್ದಿನ್ ಅವರು ಭಾಗವಹಿಸಿ ಬೆಸ್ಟ್ ಬೆಂಚ್ ಪ್ರೆಸರ್ ಅಫ್ ಇಂಡಿಯಾ-2023ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಬೆಂಚ್ ಸ್ಪರ್ದೆಗಳಿಗೆ ಆಯ್ಕೆಯಾಗಿರುತ್ತಾರೆ. ಇದೇ ಸ್ಪರ್ಧೆಗಳಲ್ಲಿ 73 ಕೆಜಿ ತೂಕದ ವಿಭಾಗದಲ್ಲಿ ಶಹಾಬಾಜ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಬ್ರದರ್ಸ್ ಜಿಮ್ನಾ ಸಂಚಾಲಕ, ಅಂತರಾಷ್ಟ್ರೀಯ ದೇಹದಾರ್ಢ್ಯ ಪಟು ಅಕ್ರಂ ಬಾಷ, ತರಬೇತುದಾರ ಮಹಮ್ಮದ್ ರಫೀಕ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.
ದಸರಾ ಮಹೋತ್ಸವದ ಉದ್ಘಾಟಕರಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಆಯ್ಕೆ.ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ.ಖ್ಯಾತ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖರಿಂದ ಈ ಬಾರಿಯ ದಸರಾ ಉದ್ಘಾಟನೆ.ಚಾಮುಂಡಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ.
ತಾಯಿ ಚಾಮುಂಡಿ ಗ್ಯಾರಂಟಿ ಹರಕೆ ತೀರಿಸಿದ ಸಿದ್ದು ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜತೆಗಿದ್ದರು.
ಚುನಾವಣಾ ಪೂರ್ವದಲ್ಲಿ ಇದೇ ಚಾಮುಂಡಿ ಬೆಟ್ಟದಲ್ಲಿ ಚುನಾವಣೆ ಗ್ಯಾರಂಟಿಗಳ ಬಗ್ಗೆ ಪ್ರಮಾಣ ಮಾಡಿದ್ದು ಸ್ಮರಿಸಬಹುದು.