ಗೋಕಾಕದ ಪ್ರತೀಕ್ಷ ಕೊಕ್ಕರಿ ಚಿಕ್ಕವಯಸ್ಸಿಗೆ ಕಾದಂಬರಿ ಬರೆದ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ- ಮುಖ್ಯಮಂತ್ರಿಗಳು

ಗೋಕಾಕದ ಪ್ರತೀಕ್ಷ ಕೊಕ್ಕರಿ ಚಿಕ್ಕವಯಸ್ಸಿಗೆ ಕಾದಂಬರಿ ಬರೆದ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ- ಮುಖ್ಯಮಂತ್ರಿಗಳು

ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಇಂದಿನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಸರಳತೆ ಹಾಗೂ ಮಕ್ಕಳ ಬಗೆಗಿನ ಅವರ ಅಕ್ಕರೆ, ಸಂಸ್ಕೃತಿಯ ಬಗೆಗಿನ ಅವರ ಪ್ರೀತಿಗೆ ಉದಾಹರಣೆಯಾಗುವಂತಹ ಸ್ವಾರಸ್ಯಕರ ಸಂಗತಿಯೊಂದು  ನಡೆಯಿತು  .

ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ  ಅವರಿಗೆ ಗೋಕಾಕದ ಒಬ್ಬ 15 ವರ್ಷದ ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಕುಮಾರಿ ಪ್ರತೀಕ್ಷ ಮಲ್ಲಿಕಾರ್ಜುನ ಕೊಕ್ಕರಿ ಅವರು ಭೇಟಿ ಮಾಡಿ ತಾನು ಬರೆದ ‘ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ  ತಾಯಿ ‘ಎಂಬ ಕಾದಂಬರಿಯನ್ನು ಕೊಟ್ಟು ಮುಖ್ಯಮಂತ್ರಿಗಳಿಗೆ ಕೊಡಲು ಮನವಿ ಮಾಡಿದರು.

ಆಪ್ತ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಕೂಡಲೇ  ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾರಂಭ ನಡೆಯುತ್ತಿದ್ದ ವೇದಿಕೆಯಲ್ಲಿಯೇ  ವಿದ್ಯಾರ್ಥಿನಿಯನ್ನು ಕರೆದು ,ಆಕೆ ಬರೆದ ಕೃತಿಯನ್ನು ಪಡೆದುಕೊಂಡು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇಷ್ಟು ಚಿಕ್ಕವಯಸ್ಸಿಗೆ ಕಾದಂಬರಿ ಬರೆದ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಒಂದು ಚಿತ್ರ ತೆಗೆಯುವಂತೆಯೂ ಸೂಚಿಸಿದರು.

ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ – ಸಿಎಂ

ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ – ಸಿಎಂ

ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ – ಸಿಎಂ

ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರ ಜನ್ಮ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಕೆ.ಜೆ.ಜಾರ್ಜ್, ಶಿವರಾಜ್ ತಂಗಡಗಿ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಬಳಿಕ ಅರಸು ಅವರ ಕಾರಿನಲ್ಲೇ ಪ್ರಯಾಣಿಸಿ ವಿಧಾನಸೌಧದ ಸಭಾಂಗಣಕ್ಕೆ ಆಗಮಿಸಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.