*ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ. *
*ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ. *
*ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ. *
ನಾನು ಬೆಂಗಳೂರಿಗೆ ಬಂದ ಹೊಸರದಲ್ಲಿ ಸುಮಾರು ಸಲ ಪುನೀತ್ ಅವರನ್ನು ಶೂಟಿಂಗ್ ಟೈಮಲ್ಲಿ ಭೇಟಿಯಾಗಿದ್ದೆ, ಅವರ ನಟನೆ ನನ್ನ ಮನ ಕಲುಕಿತ್ತು ನಾನು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಗಾಗ ಭೇಟಿ ಮಾಡುವ ಸಂದರ್ಭ ಬರುತ್ತಿತ್ತು, ಅವರ ಲವಲವಿಕೆ ಮತ್ತು ಮುಗುಳುನಗೆ ಯಾವತ್ತೂ ಎಲ್ಲರನ್ನೂ ಆಕರ್ಷೀಣಯವಾಗಿ ಮಾಡುತ್ತಿತ್ತು.
ಆಮೇಲೆ ನಮ್ಮ ಪ್ರೆಸ್ ಕಾರ್ಯಕ್ರಮದಲ್ಲಿ ನಾವು ಅವರೊಂದಿಗೆ ಸುಮಾರು 4 ಗಂಟೆ ಒಂದೇ ವೇದಿಕೆಯಲ್ಲಿ ಇದ್ದಿದ್ದು ಇತಿಹಾಸ ರೀ.
ನನಗೆ ಡಾ.ರಾಜ್ ಕುಮಾರ್ ಅವರನ್ನು ಆರಾಧಿಸುತ್ತಿದ್ದೇ, ತದನಂತರ ಇವರು ತುಂಬಾ ನಟನಾ ಕೌಶಲ್ಯರಾಗಿದ್ದರಿಂದ ನಾನು ಅವರನ್ನಾ ಮೆಚ್ಚಿಕೊಂಡಿದ್ದೇ,
ಸಿನೇಮಾ ಕ್ಷೇತ್ರದಲ್ಲಿ ನಾವು ಚಿಕ್ಕವರಿದ್ದಾಗ ಶಂಕರ್ ನಾಗ್ ತೀರಿಕೊಂಡಿದ್ದು ಚಿಕ್ಕ ವಯಸ್ಸಲೇ
ಅವರಂತೆಯೇ ಇವರು ಕೂಡ ಚಿಕ್ಕ ವಯಸ್ಸಲ್ಲೇ ನಮ್ಮೆನ್ನೆಲ್ಲ ಅಗಲಿದ್ದು ದುರಂತವೇ ಸರಿ,
ವಿಧಿಯಾಟದ ಮುಂದೆ ನಾವೆಲ್ಲ
ಸಮಯದ ಗೊಂಬೆಗಳು,
ಹೋಗಿ ಬನ್ನಿ ಪುನೀತ್ ಸರ್…..,
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಸಚಿವರುಗಳಾದ ಕೆ ಎಸ್ ಈಶ್ವರಪ್ಪ, ಮುರಗೇಶ ನಿರಾಣಿ, ಗೋವಿಂದ ಕಾರಜೋಳ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು, – ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (46)ಹೃದಯಾಘಾತದಿಂದ ಮೃತಪಟ್ಟಿದ್ದು, ನಾಡಿನ ಕಲೆ, ಸಾಂಸ್ಕøತಿಕ ಲೋಕಕ್ಕೆ ಬರ ಸಿಡಿಲು ಬಡಿದಂತಾಗಿದೆ.ಇಂದು ಬೆಳಗ್ಗೆ ಜಿಮ್ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅಸ್ವಸ್ಥರಾದ ಪುನೀತ್ರಾಜ್ಕುಮಾರ್ ಅವರನ್ನು ತಕ್ಷಣವೇ ರಮಣಶ್ರೀ ಕ್ಲೀನಿಕ್ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ತುರ್ತು ಚಿಕಿತ್ಸೆ ನೀಡಿದ ಹೊರತಾಗಿಯೂ ಫಲಿಸದೆ, ಹೃದಯಾಘಾತದಿಂದ ಪುನೀತ್ರಾಜ್ಕುಮಾರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.1975ರ ಮಾರ್ಚ್ 17ರಂದು ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ಅವರ ಐದನೇ ಮಗನಾಗಿ ಜನಿಸಿದ್ದರು. ಅವರಿಗೆ ಆರಂಭದಲ್ಲಿ ಲೋಹಿತ್ ಎಂದು ನಾಮಕರಣ ಮಾಡಲಾಗಿತ್ತು. ನಂತರ ಚಿತ್ರರಂಗಕ್ಕೆ ಬಂದಾಗ ಪುನೀತ್ರಾಜ್ಕುಮಾರ್ ಎಲ್ಲರ ನೆಚ್ಚಿನ ಅಪ್ಪುವಾಗಿ ಜನಪ್ರಿಯರಾದರು.
ಸಹೋದರರಾದ ಹ್ಯಾಟ್ರಿಕ್ಹಿರೋ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮಿ, ಪತ್ನಿ ಅಶ್ವಿನಿ, ಇಬ್ಬರು ಪುತ್ರಿಯರಾದ ಧೃತಿ, ವಂದಿತ ಹಾಗೂ ಅಪಾರ ಪ್ರಮಾಣದ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.1980ರಲ್ಲಿ ತಮ್ಮ ತಂದೆ ರಾಜ್ಕುಮಾರ್ ಅಭಿನಯದ ವಸಂತ ಗೀತ ಚಲನಚಿತ್ರದಲ್ಲಿ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ರಾಜ್ಕುಮಾರ್, ಭಾಗ್ಯವಂತ, ಚಲಿಸುವ ಮೊಡಗಳು, ಎರಡು ನಕ್ಷತ್ರಗಳು, ಭಕ್ತಪ್ರಹಲ್ಲಾದ, ಶಿವಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನೊಜ್ಞ ಅಭಿನಯ ನೀಡಿದ್ದರು.
ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ, ಜಾಕಿ ಚಿತ್ರಗಳಿಗೆ ಪುನೀತ್ ರಾಜ್ಕುಮಾರ್ ರಾಜ್ಯ ಸರ್ಕಾರದ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದರು.
2002ರಲ್ಲಿ ಅಪ್ಪು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಎರಡನೇ ಇನ್ನಿಂಗ್ಸ್ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.
ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾಬಾಂಡ್, ಪವರ್, ದೊಡ್ಡಮನೆಹುಡುಗ, ರಣವಿಕ್ರಮ, ಯಾರೇ ಕೂಗಾಡಲಿ, ಬಿಂದಾಸ್, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ರಾಮ್, ಪರಮಾತ್ಮ, ರಾಜಕುಮಾರ, ನಟ ಸಾರ್ವಭೌಮ, ವಂಶಿ, ಪೃಥ್ವಿ, ವೀರಕನ್ನಡಿಗ, ನಿನ್ನಿಂದಲೇ, ಚಕ್ರವ್ಯೂಹ, ಅಂಜನಿಪುತ್ರ, ರಾಜ್ ದಿ ಶೋಮ್ಯಾನ್ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದರು.ಹುಡುಗರು, ಯಾರೇ ಕೂಗಾಡಲಿ, ರಣವಿಕ್ರಮ, ರಾಜಕುಮಾರ ಸೇರಿದಂತೆ ಹಲವು ಚಿತ್ರಗಳಿಗೆ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.
ಪುನೀತ್ ರಾಜ್ಕುಮಾರ್ ಚಿತ್ರಗಳೆಂದರೆ ಸಂಪೂರ್ಣ ಮನರಂಜನೆ ಹಾಗೂ ಸದಬಿರುಚಿಯ ಚಿತ್ರಗಳು ಎಂಬ ಕೀರ್ತಿಗೆ ಪಾತ್ರವಾಗಿದ್ದವು, ಇಡೀ ಕುಟುಂಬ ಯಾವುದೇ ಮುಜುಗರ ಇಲ್ಲದೆ ಕುಳಿತು ನೋಡಬಹುದಾದ ಚಿತ್ರಗಳನ್ನು ಪುನೀತ್ರಾಜ್ಕುಮಾರ್ ಕೊಟ್ಟಿದ್ದರು.ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಗುರುತಿಸಲ್ಪಟ್ಟಿದ್ದ ಪುನೀತ್ ರಾಜ್ಕುಮಾರ್ ರಾಜ್ಯ ಸರ್ಕಾರದ ಹಲವಾರು ಜನಪರ ಜಾಹಿರಾತುಗಳಲ್ಲಿ ಉಚಿತವಾಗಿ ನಟಿಸಿದ್ದರು.
ಕೆಎಂಎಫ್, ವಿದ್ಯುತ್ ಇಲಾಖೆ, ಬಿಎಂಟಿಸಿ ಸಂಸ್ಥೆಗಳಿಗೆ ರಾಯಭಾರಿಯಾಗಿದ್ದರು. ಇತ್ತೀಚೆಗಷ್ಟೇ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾದ ಜಾಹಿರಾತಿನಲ್ಲೂ ರಾಯಭಾರಿಯಾಗಿ ನಟಿಸಿದ್ದರು.ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಮೈಲಿಗಲ್ಲು ಸಾಸಿದ ಕನ್ನಡದ ಕೋಟ್ಯಾಪತಿಯ ನಾಲ್ಕು ಸರಣಿ ಕಾರ್ಯಕ್ರಮದ ನಿರೂಪಕರಾಗಿ ಪುನೀತ್ರಾಜ್ಕುಮಾರ್ ಯಶಸ್ವಿಯಾಗಿದ್ದರು. ಫ್ಯಾಮಿಲಿ ಪವರ್ ಎಂಬ ಮತ್ತೊಂದು ರಿಯಾಲಿಟಿ ಶೋನಲ್ಲೂ ನಿರೂಪಕರಾಗಿದ್ದರು.
ಹಿರಿಯಣ್ಣ ಶಿವರಾಜ್ಕುಮಾರ್ ಅವರ ನಟನೆಯ ಭಜರಂಗಿ-2 ಚಿತ್ರ ಇಂದು ಬಿಡುಗಡೆಯಾಗಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ಕಳೆದೆರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟ ಯಶ್ ಮತ್ತು ಶಿವಣ್ಣ ಅವರೊಂದಿಗೆ ಹಾಡೊಂದಕ್ಕೆ ಪುನೀತ್ ಹೆಜ್ಜೆ ಹಾಕಿದ್ದರು.ಇಂದು ಅವರು ಭಜರಂಗಿ-2 ಚಿತ್ರವನ್ನು ವೀಕ್ಷಿಸಬೇಕಿತ್ತು. ಆದರೆ, ತಂದೆಯ ಊರು ಚಾಮರಾಜನಗರ ಜಿಲ್ಲೆಯ ಗಾಜನೂರಿಗೆ ಹೋಗಿ ಬಂದು ಎರಡು ದಿನಗಳ ಬಳಿಕ ಭಜರಂಗಿ-2 ಚಿತ್ರ ನೋಡುವುದಾಗಿ ಹೇಳಿದ್ದರು. ಆದರೆ, ದುರಾದೃಷ್ಟವಶಾತ್ ಅಣ್ಣನ ಚಿತ್ರವನ್ನು ಅವರು ನೋಡಲು ಆಗಲೇ ಇಲ್ಲ.
ಪುನೀತ್ ರಾಜ್ಕುಮಾರ್ ಎಂದರೆ ಫಿಟ್ನೆಸ್ ಎಂಬಷ್ಟರ ಮಟ್ಟಿಗೆ ಅವರು ದೇಹದಾಢ್ರ್ಯವನ್ನು ಕಾಯ್ದುಕೊಂಡಿದ್ದರು. ಫ್ಲಿಪು, ಸ್ಟಂಟ್ಗಳ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗುತ್ತಿದ್ದವು.ಸರಳತೆ, ಸೌಜನ್ಯತೆಗೆ ಹೆಸರುವಾಸಿಯಾಗಿದ್ದರಲ್ಲದೆ, ಅವರ ಮಾನವೀಯತೆಯ ಸ್ಪಂದನೆಗಳು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದರು.
ಪಾರ್ವತಮ್ಮ ರಾಜ್ಕುಮಾರ್ ಅವರು ಮೈಸೂರಿನಲ್ಲಿ ಸ್ಥಾಪಿಸಿ ನಡೆಸುತ್ತಿದ್ದ ಶಕ್ತಿಧಾಮ ಆಶ್ರಮಕ್ಕೆ ಪುನೀತ್ರಾಜ್ಕುಮಾರ್ ಬೆಂಬಲವಾಗಿ ನಿಂತಿದ್ದರು. ತಂದೆ ರಾಜ್ಕುಮಾರ್ ಅವರ ಹಾದಿಯನ್ನೇ ಅನುಸರಿಸಿದ ಪುನೀತ್ರಾಜ್ಕುಮಾರ್ ಪರಭಾಷೆಗಳಿಂದ ಎಷ್ಟೇ ದೊಡ್ಡ ಪ್ರಮಾಣದ ಆಹ್ವಾನ ಬಂದರೂ ಕನ್ನಡ ಚಿತ್ರರಂಗ ಬಿಟ್ಟು ಹೋಗಿರಲಿಲ್ಲ.