ರೈತರ‌ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರಕ್ಕೆ ಚಾಲನೆ . ಸಚಿವ ಚಲುವರಾಯಸ್ವಾಮಿ

ರೈತರ‌ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರಕ್ಕೆ ಚಾಲನೆ . ಸಚಿವ ಚಲುವರಾಯಸ್ವಾಮಿ

ಕೃಷಿಗೆ ಸಂಬಂಧಿತ ಮಾಹಿತಿ,ಸಲಹೆ ಮಾರ್ಗದರ್ಶನ‌ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಕೃಷಿ ಆಯುಕ್ತಾಲಯದಲ್ಲಿ ರೈತ ಕರೆ ಕೇಂದ್ರ ಉದ್ಘಾಟಿಸಿ,ನಂತರ ಸಂಗಮ ಸಭಾಂಗಣದಲ್ಲಿ 2023-24 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಭೀಮಾ ಪಲ್ಸ್ ತೊಗರಿ ಬೇಳೆ
ಬ್ರಾಂಡ್ ಬಿಡುಗಡೆ ಮಾಡಿ ಸಚಿವರು ಮಾತನಾಡಿದರು.
ಬೆಳೆ ,ಹವಾಮಾನ , ವಿಮೆ ,ರೈತ ವಿದ್ಯಾನಿಧಿ,ಕೃಷಿ ಸಂಜೀವಿನಿ,ಪಿ.ಎಂ ಕಿಸಾನ್,ಕೆ‌.ಕಿಸಾನ್ ,
ಬೆಳೆ ಸಮೀಕ್ಷೆ ಮತ್ತಿತರ ವಿಷಯಗಳಲ್ಲಿ ಉಪಯುಕ್ತ ಮಾಹಿತಿ , ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸುಲಭವಾಗಿ ಒದಗಿಸುವುದು ಏಕೀಕೃತ ರೈತ ಕರೆ ಕೇಂದ್ರದ ಉದ್ದೇಶ ಎಂದರು.
ಈ ಹಿಂದೆ ವಿವಿಧ ಯೋಜನೆಗಳಿಗೆ ಇದ್ದ 8 ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ
1800-425-3553 ನೂತನ ಏಕೀಕೃತ ಸಹಾಯವಾಣಿ ಕರೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.
ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಇಲಾಖೆ ಮುಂದಾಗಿದೆ ಇದರ ಅಂಗವಾಗಿ ಭೀಮಾ ಫಲ್ಸ್ ಎಂಬ ಬ್ರಾಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ರೈತರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ . ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮ‌ದಲ್ಲಿಟ್ಟು ಸಮೀಕ್ಷೆ ನಡೆಸಬೇಕು ಎಂದು ಅವರು ಹೇಳಿದರು.
ಕಂದಾಯ ,ಕೃಷಿ ,
ತೋಟಗಾರಿಕೆ,ರೇಷ್ಮೆ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗುತ್ತಿವೆ ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿ ಕೊಂಡರೆ ಉತ್ತಮ ಎಂದು ಸಚಿವರು ಹೇಳಿದರು
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಮಾತನಾಡಿ ಏಕೀಕೃತ ರೈತ ಕರೆ ಕೇಂದ್ರ ಪ್ರಾಂರಂಭ ಅತ್ಯಂತ ಮಹತ್ವದ್ದಾಗಿದೆ .
ಇದರಿಂದ ರೈತರಿಗೆ ಮಾಹಿತಿ ನೀಡುವ ಜೊತೆಗೆ ಸಮಸ್ಯೆಗಳನ್ನು ಅರಿಯಬಹುದಾಗಿದೆ
ಯಾವ ವಿಚಾರ ತಕ್ಷಣಕ್ಕೆ ಹೆಚ್ಚು ಪ್ರಮುಖ್ಯತೆ ನೀಡಬೇಕು , ಗಮನ ಹರಿಸಬೇಕು ಎಂದೂ ಅಂದಾಜಿಸಲು ಅನುಕೂಲವಾಗಲಿದೆ ಎಂದರು.
ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಯೋಜನೆಗಳು ಹೆಚ್ಚು ಪ್ರಗತಿಪರವಾಗಿವೆ ಎಂದು ಅವರು ಅಭಿಪ್ರಾಯ ಪಟ್ಟರು .
ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರವೂ ಸಹ ಅತ್ಯಂತ ಮಹತ್ವವಾದ್ದು ರೈತರ ಹಿತ ಸಂರಕ್ಷಣೆಗೆ ಅನುಕೂಲಕರ ಹಾಗೂ ಇಲಾಖೆಗಳ ನಡುವಿನ ಸಮಮ್ವಯತೆಗೂ ಸಹಕಾರಿ ಎಂದು ಪ್ರಧಾನ ಕಾರ್ಯದರ್ಶಿ ವಿ ಅನ್ಬು ಕುಮಾರ್ ಹೇಳಿದರು.
ರೈತರ ಉತ್ಪನ್ನ ಗಳ ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಮುಖ್ಯ ಆ ನಿಟ್ಟಿನಲ್ಲಿ ಈಗಾಗಗಲೇ ಇಲಾಖೆ ಕ್ರಮ ವಹಿಸುತ್ತಿರುವುದು ಅಭಿನಂದನಾರ್ಹ ಎಂದರು .
ಕೃಷಿ ಇಲಾಖೆ ಆಯುಕ್ತರಾದ ವೈ ಎಸ್ ಪಾಟೀಲ್ ಆಶಯ ನುಡಿಗಳನ್ನಾಡಿದರು. ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಡಿ.ಎಸ್. ರಮೇಶ್,ರೇಷ್ಮೆ ಅಭಿವೃದ್ಧಿ ಆಯುಕ್ತರಾದ ರಾಜೇಶ್ ಗೌಡ ಎಂ.ಬಿ , ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೆಶಕರಾದ ಮಾಧುರಾಮ್ ಕೃಷಿ ಇಲಾಖೆ ನಿರ್ದೇಶಕರಾದ ಪುತ್ರ ,ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು

ರಾಜ್ಯದ ಆನೆಗಳ ಸಂಖ್ಯೆಯಲ್ಲಿ 350ರಷ್ಟು ಹೆಚ್ಚಳ: ಈಶ್ವರ ಖಂಡ್ರೆ

ರಾಜ್ಯದ ಆನೆಗಳ ಸಂಖ್ಯೆಯಲ್ಲಿ 350ರಷ್ಟು ಹೆಚ್ಚಳ: ಈಶ್ವರ ಖಂಡ್ರೆ


ಅರಣ್ಯ ವನ್ಯಜೀವಿ ಸಂರಕ್ಷಣೆಗೆ ದೂರಸಂವೇದಿ ತಂತ್ರಜ್ಞಾನ ಬಳಕೆ
ಬೆಂಗಳೂರು, ಆ.9: ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಸುಮಾರು 350ರಷ್ಟು ಹೆಚ್ಚಳವಾಗಿದ್ದು, ಆನೆಗಳ ಶ್ರೇಣಿ 5914ರಿಂದ 6877 ಎಂದು ವಿಶ್ಲೇಷಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು, ಈಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದರು.
ಆನೆಗಳು ಬಲಿಷ್ಠ ವನ್ಯಜೀವಿಯಾದರೂ ಭಾರತ ಸೇರಿದಂತೆ ವಿಶ್ವಾದ್ಯಂತ ಅಪಾಯದಲ್ಲಿವೆ. ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012 ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017 ರಲ್ಲಿ ನಡೆದಿತ್ತು.
ಬಳಿಕ 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು. ಆದರೆ ಈ ಸಮೀಕ್ಷೆಯು ಮಾದರಿ ಬ್ಲಾಕ್‌ ಏಣಿಕೆ (Sample Block Count) ಮತ್ತು ಆನೆಗಳ ಸಂಖ್ಯೆ ಸ್ವರೂಪದ (Population Structure) ಮೌಲ್ಯ ಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳ ಗಣತಿ ಮತ್ತು ಸಂಖ್ಯಾ ಸ್ವರೂಪ ಅಂದರೆ ಲಿಂಗ ಮತ್ತು ವಯಸ್ಸಿನ ವರ್ಗೀಕರಣ ಮಾಡಲು ಬಹಳ ಮುಖ್ಯವಾಗಿರುತ್ತದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ-17 ರಿಂದ ಮೇ-19 ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಯಿತು ಎಂದು ವಿವರಿಸಿದರು.
ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ, ಗಣತಿ ಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಪ್ರೊ|| ಆರ್‌. ಸುಕುಮಾರ್‌ ರವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ (IISC) ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿಯನ್ನು ನಡೆಸಲಾಗಿದೆ.
ರಾಜ್ಯದ 32 ವಿಭಾಗಗಳಿಂದ 3400 ಕ್ಕೂ ಹೆಚ್ಚು ಸಿಬ್ಬಂದಿ ಈ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು.
ಆನೆ ಗಣತಿಯನ್ನು ಮೂರು ವಿಧಾನಗಳಲ್ಲಿ ಅಂದರೆ, ನೇರ ಏಣಿಕೆ ಅಥವಾ ಬ್ಲಾಕ್‌ ಏಣಿಕೆ (ಮೇ-17, 2023) (Direct Count):- ಈ ವಿಧಾನದಲ್ಲಿ 5.0 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿ ಬ್ಲಾಕ್‌ ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸಲಾಯಿತು ಮತ್ತು ಒಟ್ಟು ಬೀಟ್‌ ಗಳ ಸಂಖ್ಯೆಯ ಸುಮಾರು ಶೇಕಡ 30 ರಿಂದ 50 ರಷ್ಟು ಒಳಗೊಂಡಿತ್ತು. ಟ್ರಾಂಜೆಕ್ಟ್‌ ಸಮೀಕ್ಷೆ ಅಥವಾ ಲದ್ದಿ ಏಣಿಕೆ ವಿಧಾನ (ಮೇ-18, 2023) (Dung Count):- ಈ ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜಾಕ್ಟ್‌ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಏಣಿಸಲಾಯಿತು. ಈ ಅಂಕಿ ಅಂಶದ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿ ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತಿದೆ ಮತ್ತು ಸಧ್ಯದಲ್ಲೆ ಫಲಿತಾಂಶ ದೊರೆಯಲಿದೆ. ವಾಟರ್‌ ಹೋಲ್‌ ಏಣಿಕೆ (ಮೇ-19, 2023) (Waterhole Count):- ಆನೆಗಳು ನಿಯಮಿತವಾಗಿ ಭೇಟಿ ನೀಡುವ ವಾಟರ್‌ ಹೋಲ್‌ ಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಏಣಿಸುವ ಕಾರ್ಯ ನಡೆಸಲಾಯಿತು. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ ಎಂದರು.
ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಏಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18975 ಚದರ ಕಿ.ಮೀ ಪ್ರದೇಶದ ಪೈಕಿ 6104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು.
ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಈ ಸಮೀಕ್ಷೆ ಮತ್ತು ವರದಿಯು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಮಾಹಿತಿ ನೀಡಿದರು.
ಆನೆ ವರದಿ ಬಿಡುಗಡೆ ಸಂದರ್ಭದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದೇ ಅಖ್ತರ್, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಸುಭಾಶ್ ಮಾಲ್ಕೇಡೆ, ಕುಮಾರ್ ಪುಶ್ಕರ್, ಸಂಜಯ್ ಬಿಜ್ಜೂರ್, ಸ್ಮಿತಾ ಬಿಜ್ಜೂರ್ ಮತ್ತಿತರರು ಪಾಲ್ಗೊಂಡಿದ್ದರು.
ಅರಣ್ಯ ವನ್ಯಜೀವಿ ಸಂರಕ್ಷಣೆಗೆ ದೂರಸಂವೇದಿ ತಂತ್ರಜ್ಞಾನ ಬಳಕೆ
ಬೆಂಗಳೂರು, ಆ.9: ರಾಜ್ಯದ ಅರಣ್ಯ ಇಲಾಖೆ ಕಾನನ, ನೈಸರ್ಗಿಕ ಸಂಪನ್ಮೂಲ, ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಎ.ಐ.ಎಸ್, ಜಿಐ.ಎಸ್. ಮತ್ತು ದೂರಸಂವೇದಿ ತಂತ್ರಜ್ಞಾನ ಬಳಕೆ ಕುರಿತ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾನವ-ವನ್ಯಜೀವಿ ಆವಾಸ ಸ್ಥಾನಗಳ ನಡುವೆ ತೆಳುವಾಗುತ್ತಿರುವ ಗಡಿ, ಅರಣ್ಯ ಹಾಗೂ ನೈಸರ್ಗಿಕ ಸಂಪನ್ಮೂಲದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಮತ್ತು ವನ್ಯಜೀವಿ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ತಂತ್ರಜ್ಞಾನ ಬಳಕೆಗೆ ನಿರ್ಧರಿಸಲಾಗಿದೆ ಎಂದರು.
ಇ-ಮೌಲ್ಯಮಾಪನ, ಆಂಡ್ರಾಯ್ಡ್ ಆಪ್ ಮತ್ತು ವೆಬ್ ವ್ಯವಸ್ಥೆಯ ಮೂಲಕ ಇಲಾಖೆಯ ಅರಣ್ಯ ಕಾಮಗಾರಿಗಳ ಆಂತರಿಕ ಹಾಗೂ ಬಾಹ್ಯ ಮೌಲ್ಯಮಾಪನ ಮಾಡಲಾಗುತ್ತಿದೆ. ಇದರ ನೆರವಿನಿಂದ ವಿವಿಧ ಯೋಜನೆ ಮತ್ತು ನೆಡುತೋಪುಗಳ ಕ್ಷಮತೆಯ ವರದಿ ಪಡೆಯಲಾಗುತ್ತಿದೆ ಎಂದರು.
ಅರಣ್ಯಭೂಮಿ ತಂತ್ರಾಂಶವು ಅಧಿಸೂಚಿತ ಅರಣ್ಯ ಪ್ರದೇಶಗಳ ಉಪಗ್ರಹ ಛಾಯಾಚಿತ್ರ ಮತ್ತು ಗಣಕೀಕೃತ ಭೌಗೋಳಿಕ ಮಾಹಿತಿಯ ಅರಣ್ಯ ಗ್ರಾಮ ನಕ್ಷೆ ಒಳಗೊಂಡಿರುತ್ತದೆ ಎಂದೂ ಸಚಿವರು ತಿಳಿಸಿದರು.

ಆನೆಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಒಂದನೇ ಸ್ಥಾನದಲ್ಲಿದ್ದರೆ ತಮಿಳುನಾಡು ಹಾಗೂ ಕೇರಳ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ
ಆನೆಗಳ ಸಂಖ್ಯೆಯಲ್ಲಿ ಈ ಬಾರಿಯೂ ಕರ್ನಾಟಕವೇ ನಂ.1 ಆಗುತ್ತದೆ. ಆದರೆ, ತಾಂತ್ರಿಕವಾಗಿ ಇನ್ನೂ ಅಸ್ಸಾಂ ಗಣತಿಯ ವಿವರ ಲಭ್ಯವಿಲ್ಲದ ಕಾರಣ ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ.1 ಎಂದು ಹೇಳಲಾಗಿದೆ ಅಷ್ಟೇ. ಅಸ್ಸಾಂನಲ್ಲಿ ಕಳೆದ ಬಾರಿ ಅಂದರೆ 2017ರ ಆನೆ ಗಣತಿಯಲ್ಲಿ 5719 ಆನೆ ಇದೆ ಎಂದು ಅಂದಾಜು ಮಾಡಲಾಗಿತ್ತು.

ಪ್ರತಿ ಶಾಸಕರೂ  ಜನರ ಧ್ವನಿಯಾದಾಗ ಮಾತ್ರ  ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು : ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರತಿ ಶಾಸಕರೂ ಜನರ ಧ್ವನಿಯಾದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು : ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು, ಜುಲೈ 18: 2021- 22 ನೇ ಸಾಲಿಗೆ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ವಿರೋಧ ಪಕ್ಷದ ನಾಯಕ ಎಸ್ ಆರ್.ಪಾಟೀಲರಿಗೆ ಹಾಗೂ 2022 – 23 ನೇ ಸಾಲಿಗೆ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಭಿನಂದಿಸಿ ಮಾತನಾಡಿದರು.
ಶಾಸಕರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು
ಭಾರತ ಸಂವಿಧಾನ ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ್ಮುಖಿಯದುದ್ದು. ಅದರ ಚೈತನ್ಯ ನಿರಂತರವಾದುದು. ನಮ್ಮ ಸಮಾಜ ಹೇಗಿರಬೇಕೆಂದು, ಹೇಗೆ ಆಳಿಸಿಕೊಳ್ಳಬೇಕೆಂದು ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಸರ್ಕಾರ, ಮೇಲ್ಮನೆ, ಕೆಳಮನೆ ಶಾಸಕರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ಬದ್ಧತೆ ನಮ್ಮ ಮುಖ್ಯ ಗುರಿಯಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಜನಪರ ಕಾಳಜಿ ಅಗತ್ಯ
ಸಂಸತ್ತು, ವಿಧಾನಸಭೆಯನ್ನು ದೇವರು ಎಂದು ಕರೆಯುತ್ತೇವೆ. ಎಲ್ಲರಿಗೂ ಒಳಿತು ಮಾಡು ಎಂದು ಕೇಳಿಕೊಂಡರೆ ಒಳಿತಾಗುತ್ತದೆ. ನಾವು ಇಲ್ಲಿಗೆ ಬರುವುದು ದೇಗುಲಕ್ಕೆ ಬಂದಂತೆ. ನಾವು ಜನಸೇವಕರು. ಇಬ್ಬರೂ ಜನಪರ ಕಾಳಜಿ ಇಟ್ಟು ಕೊಂಡು ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಜನರ ಧ್ವನಿಯಾದಾಗ ಮಾತ್ರ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಶಾಸಕರಾದವರಿಗೆ ಅಧ್ಯಯನ ಬಹಳ ಮುಖ್ಯ ಎಂದರು.
ಜನರ ಧ್ವನಿಯಾಗಿದ್ದಾರೆ
ಸಮಾಜಕ್ಕೆ ಸಂಬಂಧಿಸಿದಂತೆ ಮಾತನಾಡಬೇಕು. ಜನರ ಸಮಸ್ಯೆಗಳು, ಜನರ ಧ್ವನಿಯಾಗಿ ಮಾತನಾಡುವುದು ಮುಖ್ಯ. ಸದನದ ಇತರರಿಗೆ ಅವರ ಭಾಷಣ, ವಿಚಾರಗಳು ಮಾದರಿಯಾಗಿವೆ ಎಂದರು.
ಮೇಲ್ಪಂಕ್ತಿಯನ್ನು ಹಾಕಿದ್ದಾರೆ
ಎಲ್ಲಾ ಶಾಸಕರು ಉತ್ತಮರೇ ಎಂದು ಭಾವಿಸಿದ್ದೇನೆ. ಇವರಿಬ್ಬರೂ ಅತ್ಯುತ್ತಮ ಶಾಸಕರು. ಜನರ ಧ್ವನಿಯಾಗಲು ಮೇಲ್ಪಂಕ್ತಿಯನ್ನು ಬಿಟ್ಟುಹೋಗಿದ್ದಾರೆ. ಎಸ್.ಆರ್.ಪಾಟೀಲರು ಆಡು ಮುಟ್ಟದ ಸೊಪ್ಪಿಲ್ಲದಂತೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಬಹಳ ಮಾತನಾಡಿದ್ದಾರೆ. ಕೃಷ್ಣಾ ಮೂರನೇ ಹಂತ ಆಗಬೇಕೆಂದು ಬಲವಾಗಿ ವಾದ ಮಾಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನ, ಅವಕಾಶ ವಂಚಿತರ ಬಗ್ಗೆ ಧ್ವನಿಯಾಗಿ ಕೆಲಸ ಮಾಡುವಲ್ಲಿ ಇತರರಿಗಿಂತ ಮುಂದೆ ಹೋಗಿದ್ದಾರೆ. ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವಂತಾಗಲಿ ಎಂದು ಮುಖ್ಯ ಮಂತ್ರಿಗಳು ಹಾರೈಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಚಿವರಾದ ಹೆಚ್.ಕೆ ಪಾಟೀಲ್ ಹಾಗೂ ಎನ್.ಎಸ್. ಬೋಸ ರಾಜು, ಪರಿಷತ್ ಸದಸ್ಯರಾದ ಭೋಜೇಗೌಡ, ಟಿ. ಎ. ಶರವಣ, ಮುಖ್ಯ ಸಚೇತಕ ಸಲೀಂ ಅಹ್ಮದ್, ವೈ.ಎ. ನಾರಾಯಣಸ್ವಾಮಿ, ಶಾಸಕ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ರೈತರೊಂದಿಗೊಂದು ದಿನಕ್ಕೆ ಒಂದು ವರ್ಷ,  ಕೃಷಿ ಸಚಿವರ ಮಹತ್ವಾಕಾಂಕ್ಷೆ ಯೋಜನೆ

ರೈತರೊಂದಿಗೊಂದು ದಿನಕ್ಕೆ ಒಂದು ವರ್ಷ,  ಕೃಷಿ ಸಚಿವರ ಮಹತ್ವಾಕಾಂಕ್ಷೆ ಯೋಜನೆ

ಬೆಂಗಳೂರು,ನ.4: ಕೃಷಿ ಸಚಿವ ಬಿ.ಸಿ.ಪಾಟೀಲರ ಮಹತ್ವಾಕಾಂಕ್ಷೆಯ “ರೈತರೊಂದಿಗೊಂದು ದಿನ” ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬುತ್ತಿದ್ದು, ಕಳೆದ ಬಾರಿಯಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಈ ಬಾರಿಯೂ ಸಹ ತಮ್ಮ ಜನ್ಮದಿನವನ್ನು ರೈತರೊಂದಿಗೆ ಕಳೆಯಲಿದ್ದಾರೆ.
ಅಂದ್ಹಾಗೆ ನ.14 ಬಿ.ಸಿ.ಪಾಟೀಲರ ಜನ್ಮದಿನ.ಕಳೆದ ವರ್ಷದಿಂದ ತಮ್ಮ ಜನ್ಮದಿನವನ್ನು ರೈತರಿಗಾಗಿ ಮುಡುಪಾಗಿಟ್ಟಿರುವ ಬಿ.ಸಿ.ಪಾಟೀಲರು ಈ ಬಾರಿಯೂ ಕೂಡ ತಮ್ಮ ಹುಟ್ಟುಹಬ್ಬವನ್ನು ಅನ್ನದಾತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.ರೈತ ಪರ ಕಾಳಜಿ ರೈತರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ತಡೆಗಟ್ಟಿ ಕೋಲಾರ ಮಾದರಿಯ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ರೈತರಲ್ಲಿ ಈ ಕುರಿತು ಜಾಗೃತಿ ಹೆಚ್ಚಿಸಲು ಆರಂಭವಾಗಿದ್ದೇ “ರೈತರೊಂದಿಗೊಂದು ದಿನ”.
ಕೃಷಿ ಸಚಿವರಾದ ಬಳಿಕ ಮೊದಲ ಬಾರಿಗೆ ಬಿ.ಸಿ.ಪಾಟೀಲರು ರೈತರ ಮನೋಸ್ಥೈರ್ಯ ಹೆಚ್ಚಿಸಲು ತಮ್ಮ ಜನ್ಮದಿನದಂದೇ “ರೈತರೊಂದಿಗೊಂದು ದಿನ” ಎನ್ನುವ ರೈತೋಪಯೋಗಿ ಕಾರ್ಯಕ್ರಮಕ್ಕೆ ಮುಂದಾದರು.ಕಳೆದ ನ.14 ರಂದು ಆರಂಭವಾದ ಈ ದಿನ ಈಗ ಒಂದು ವರ್ಷ ಪೂರೈಸುತ್ತಿದ್ದು, ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ಕೃಷಿ ಇಲಾಖೆಗೆ ಸ್ವಯಂಪ್ರೇರಿತರಾಗಿ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಈ ಬಾರಿಯ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಕೃಷಿ ಸಚಿವರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ.ರೈತರೊಂದಿಗೊಂದು ದಿನ ಈಗಾಗಲೇ 10 ಜಿಲ್ಲೆಗಳಲ್ಲಿ ನಡೆದಿದ್ದು, ಹಾವೇರಿ 11 ನೇ ಜಿಲ್ಲೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕಾಲಿಗೆ ಚಕ್ರಕಟ್ಟಿಕೊಂಡು ಬಿ.ಸಿ.ಪಾಟೀಲರು ಕೋವಿಡ್ ನಿರ್ಬಂಧದಲ್ಲಿಯೂ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟವನ್ನು ಅರಿಯುವ ಪ್ರಯತ್ನ ಮಾಡಿದ್ದರು. ಇದೆಲ್ಲದರಿಂದ ರೂಪತಳೆದಿದ್ದೇ “ರೈತರೊಂದಿಗೊಂದು ದಿನ”.ಕೃಷಿ ಸಚಿವರು ಹಾಗೂ ಕೃಷಿ ಅಧಿಕಾರಿಗಳು ರೈತರ ಬಳಿಯೇ ತೆರಳಿ ಅವರ ಸಂಕಷ್ಟವನ್ನು ಅರಿತು ಸಾಧ್ಯವಾದಲ್ಲಿ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಂದ್ಹಾಗೆ ಈ ಬಾರಿಯ ರೈತರೊಂದಿಗೊಂದು ದಿನ ಕೃಷಿ ಸಚಿವರ ಮತಕ್ಷೇತ್ರ ಹಿರೇಕೆರೂರಿನಲ್ಲಿ ಆಯೋಜನೆಗೊಂಡಿದ್ದು, ಹಾವೇರಿ ಜಿಲ್ಲೆಯ ರೈತರಿಗೆ ಈ ದಿನ ಸದುಪಯೋಗವಾಗಲಿದೆ.
ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ ಸಚಿದ್ವಯರ ಭೇಟಿ.

ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ ಸಚಿದ್ವಯರ ಭೇಟಿ.

ಇಂದು ಸಂಜೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಗೃಹ ಕಚೇರಿಗೆ ಹಿಂದುಳಿದ ಜಾತಿಗಳ ಮಠಾಧೀಶರ ಒಕ್ಕೂಟದವರು ಭೇಟಿ ನೀಡಿ ತಮ್ಮ ಮಠ ಮಾನ್ಯಗಳಿಗೆ ಸರ್ಕಾರದಿಂದ ಆಗಬೇಕಾಗಿರುವ ಹಲವಾರು ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಇಂದು ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಶ್ರೀ ಕೆ.ಎಸ್.ಈಶ್ವರಪ್ಪರವರನ್ನು ಭೇಟಿ ಮಾಡಿದರು.
ಸಭೆಯಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು, ಬಸವ ಮಾಚಿದೇವ ಮಹಾಸ್ವಾಮಿಗಳು, ಭಗೀರಥ ಪೀಠದ ಪುರುಷೊತ್ತಮಾನಂದ ಮಹಾಸ್ವಾಮಿಗಳು, ಶ್ರೀ ಶ್ರೀ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಸೇರಿದಂತೆ ಇನ್ನೂ ಹಲವಾರು ಮಹಾಸ್ವಾಮಿಜಿಗಳು ಸೇರಿದ್ದರು.
ಕನಕಗುರುಪೀಠದ ಮಹಾಸ್ವಾಮಿಗಳು ಮಾತನಾಡಿ.
ಈ ಹಿಂದೆಯೇ ಹಲವಾರು ಬಾರಿ ನಾವೆಲ್ಲ ಒಂದು ಕಡೆ ಸೇರಲು ನಿಶ್ಚಯಸಿದ್ದೀವಿ ಆದರೆ ಇಂದು ಆ ಸುಕಾಲ ಕೂಡಿ ಬಂದಿದೆ.
ನಮ್ಮ ಹಿಂದುಳಿದ ದಲಿತ ಮಠಗಳ ಒಕ್ಕೂಟದಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.
ಸೂರಿಲ್ಲದ ಮಠಮಾನ್ಯಗಳಿಗೆ ಮಾನ್ಯ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಈ ಹಿಂದೆ ಸದಾನಂದಗೌಡರು ಮುಖ್ಯಮಂತ್ರಿಗಳಿದ್ದಾಗ ನಾರಾಯಣಸ್ವಾಮಿಗಳು ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಸಾಕಷ್ಟು ಹಿಂದುಳಿದ ದಲಿತ ಮಠಗಳಿಗೆ ಸೂರು ಕಲ್ಪಿಸಿಕೊಟ್ಟಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ ಜಾತಿ ಸಂಘರ್ಷ ತಡೆಯುವುದು ಒಕ್ಕೂಟದ ಮೂಲ ಉದ್ದೇಶ ಎಂದು ಶ್ರೀಗಳು ತಿಳಿಸಿದರು.

ನಂತರ
ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮಾತನಾಡಿ
ದೇವಲೋಕದಂತೆ ಎಲ್ಲ ಸ್ವಾಮೀಜಿಗಳು ನಮ್ಮ ಮನೆಗೆ ಬಂದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ, ಸರ್ಕಾರ ಮಾಡುವ ಕೆಲಸಗಳನ್ನು ಮಾನ್ಯ ಮಠಗಳು ಮತ್ತು ಸ್ವಾಮೀಜಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ.
ಮಠಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ.
ಸರ್ಕಾರದಿಂದ ಬರುವ ಎಲ್ಲ ಸೌಲತ್ತುಗಳನ್ನು ನೀಡುತ್ತಿದ್ದೇವೆ, ಇನ್ನೂ ಅವರ ಅಹವಾಲುಗಳ ಇದ್ದರೆ ಅವುಗಳನ್ನು ಕೂಡ ಬಗೆಹರಿಸುತ್ತೇವೆ ಅವಶ್ಯಕತೆ ಬಿದ್ದರೆ ಮಾನ್ಯ ಮುಖ್ಯಮಂತ್ರಿಗಳನ್ನೂ ಅವರೊಂದಿಗೆ ಭೇಟಿ ಮಾಡಿ ಅವರ ಎಲ್ಲ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವ ಎಲ್ಲ ಭರವಸೆ ನಮಗಿದೆ ಎಂದು ವಿವರಿಸಿದರು.
ನಂತರ ಹಿಂದುಳಿದ ಕಲ್ಯಾಣ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಇಂದು ನಮ್ಮನ್ನು ಮತ್ತು ನಮ್ಮ ಹಿರಿಯ ನಾಯಕರಾದ ಶ್ರೀ ಕೆ.ಎಸ್.ಈಶ್ವರಪ್ಪರವರನ್ನು ಮಾನ್ಯ ಹಿಂದುಳಿದ ಮತ್ತು ದಲಿತ ಮಠಾಧೀಶರುಳು ಭೇಟಿ ಮಾಡಿ ವಿವಿಧ ಕೆಲಸ ಕಾರ್ಯಗಳ ಕುರಿತು ನಮ್ಮ ಗಮನಕ್ಕೆ ತಂದಿದ್ದಾರೆ. ಮಠಗಳಿಗೆ ಅತ್ಯಗತ್ಯ ಸೌಕರ್ಯಗಳನ್ನು ನೀಡುವ ಕುರಿತು ಕೂಡ ಚರ್ಚಿಸಿದ್ದಾರೆ. ಅವರ ಅಹವಾಲು ಕೇಳಿದ್ದೇವೆ.

ಮಠಗಳಿಗೆ ಅವಶ್ಯವಿರುವ ಸೌಕರ್ಯ ನೀಡಲಾಗುತ್ತದೆ.

ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತದೆ.

ಸಿಎಂ ಬಸವರಾಜ ಬೊಮ್ಮಾಯಿಯವರನ್ನೂ ಭೇಟಿ ಮಾಡಲಾಗುವುದು.

ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಸಿದರು.