ಊಹಾ ಪತ್ರಿಕೋದ್ಯಮ ಅತ್ಯಂತ ಅನಾಹುತಕಾರಿ

ಊಹಾ ಪತ್ರಿಕೋದ್ಯಮ ಅತ್ಯಂತ ಅನಾಹುತಕಾರಿ

ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ಅಂತರವೇ ಇಲ್ಲವಾಗಿದೆ

ತಂತ್ರಜ್ಞಾನ ಬೆಂಕಿ ಇದ್ದಂತೆ. ಅಡುಗೆಯನ್ನೂ ಮಾಡಬಹುದು-ಮನೆಯನ್ನೂ ಸುಡಬಹುದು: ಕೆ.ವಿ.ಪ್ರಭಾಕರ್

ಬೆಂಗಳೂರು ನ 16: ತಂತ್ರಜ್ಞಾನ ಬೆಂಕಿ ಇದ್ದಂತೆ. ಅಡುಗೆಯನ್ನೂ ಮಾಡಬಹುದು-ಮನೆಯನ್ನೂ ಸುಡಬಹುದು. ಬಳಸಿಕೊಳ್ಳುವವರ ಮನಸ್ಥಿತಿಗೆ ತಕ್ಕಂತೆ ಫಲಿತಾಂಶ ಇರುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಡೀಪ್ ಫೇಕ್ ವಿಡಿಯೊ ವೈರಲ್ ಆಗಿತ್ತು. ಅದು ಫೇಕ್ ಎಂದು ಗೊತ್ತಾಗುವುದರೊಳಗೆ ಅದನ್ನು ಲಕ್ಷಾಂತರ ಮಂದಿ ಅಸಲಿ ಎಂದೇ ನಂಬಿ ಬಿಟ್ಟಿದ್ದರು. ರಶ್ಮಿಕಾ ಅವರ ಬದಲಿಗೆ ಯಾವುದೋ ಧಾರ್ಮಿಕ ನಾಯಕರ, ರಾಜಕೀಯ ನಾಯಕರ ಡೀಪ್ ಫೇಕ್ ವಿಡಿಯೊ ಹಾಕಿ ನಕಲಿ ಸಂದೇಶ ಕೊಟ್ಟಿದ್ದರೆ ಅದು ನಕಲಿ ಎಂದು ಗೊತ್ತಾಗುವುದರೊಳಗೆ ಭಾರೀ ಅನಾಹುತಗಳನ್ನು ಮಾಡಿ ಬಿಡುತ್ತಿತ್ತು. ಹೀಗಾಗಿ ಯಾವುದೇ ತಂತ್ರಜ್ಞಾನ ಅದನ್ನು ಯಾರು ಬಳಸುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ ಎಂದರು.

ಪತ್ರಿಕೋದ್ಯಮ ತನ್ನ ವೇಗದಲ್ಲಿ ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ವ್ಯತ್ಯಾಸವನ್ನೇ ಅಳಿಸಿಬಿಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗ ಪತ್ರಿಕೋದ್ಯಮದಲ್ಲಿ ಊಹಾ ಪತ್ರಿಕೋದ್ಯಮ ಎನ್ನುವ ಅನಾಹುತಕಾರಿ ಬೆಳವಣಿಗೆ ಶುರುವಾಗಿದೆ. ಈ ಊಹೆಗೆ ಮಿತಿಯೇ ಇಲ್ಲ. ಕಣ್ಣ ಮುಂದಿರುವ ಸತ್ಯವನ್ನು ತನಗೆ ಬೇಕಾದಂತೆ ಊಹಾ ಪತ್ರಿಕೋದ್ಯಮ ಚಿತ್ರಿಸುತ್ತಿದೆ ಎಂದರು.

ನಿತ್ಯದ ಅಗತ್ಯ ವಸ್ತು ಸಂಗತಿಗಳಲ್ಲಿ ಪತ್ರಿಕೆಗಳೂ ಸೇರಿವೆ. ಪತ್ರಿಕೆಗಳ ವಿಶ್ವಾಸಾರ್ಹತೆ ಉಳಿದ ಮಾಧ್ಯಮಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಇತರೆ ಯಾವುದೇ ಮೂಲದಿಂದ ಸುದ್ದಿ ಬಂದರೂ ಅದರ ಸತ್ಯಾಸತ್ಯತೆಗೆ ಜನ ಪತ್ರಿಕೆಗಳ ಮೇಲೆ ಅಬಲಂಬಿತರಾಗಿದ್ದಾರೆ. ಸಮಾಜ ಮತ್ತು ಸರ್ಕಾರದ ನಡುವೆ ಪತ್ರಿಕೆಗಳು ಸೇತುವೆ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ವಿಜ್ಞಾನ ಬರಹಗಾರರಾದ ನಾಗೇಶ್ ಹೆಗ್ಡೆ, ತಂತ್ರಜ್ಞಾನ ವಿಶ್ಲೇಷಕ ಶ್ರೀನಿಧಿ ಮತ್ತು ಕಾವ್ಯಶ್ರೀ,  ಮಾಧ್ಯಮ‌ ಅಕಾಡೆಮಿ ಕಾರ್ಯದರ್ಶಿ ರೂಪ ಸೇರಿ ಹಲವರು ಉಪಸ್ಥಿತರಿದ್ದರು.

ಹಾಲಿ ಮಾಜಿ ಹಳೇ ಸ್ನೇಹಿತರು ಒಂದಾದ ಸಮಯ..,

ಹಾಲಿ ಮಾಜಿ ಹಳೇ ಸ್ನೇಹಿತರು ಒಂದಾದ ಸಮಯ..,

ಹಾಲಿ ಮಾಜಿ ಹಳೇ ಸ್ನೇಹಿತರು ಒಂದಾದ ಸಮಯ..,

ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಮತ್ತು ಸೋಮಣ್ಣ ರವರು

ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಮುಖಾಮುಖಿಯಾಗ ಹಳೇ  ಸ್ನೇಹಿತರುಗಳು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಮತ್ತು ಸೋಮಣ್ಣ ರವರು. ಹಳೇದಿನಗಳನ್ನು ಮೆಲಕು ಹಾಕಿದರು.

ಅದೊಂದು ಕಾಲ ಸುವರ್ಣ ಕಾಲವಿತ್ತು ಎಲ್ಲರೂ ಒಂದೇ ಪಟಾಲಂ ನಲ್ಲಿ ಇದ್ದರು.

ಸಂವಿಧಾನ ಮತ್ತು ಶರಣ ಸಾಹಿತ್ಯ ಎರಡರ ಆಶಯವೂ ಒಂದೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂವಿಧಾನ ಮತ್ತು ಶರಣ ಸಾಹಿತ್ಯ ಎರಡರ ಆಶಯವೂ ಒಂದೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಮಗೆ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ಅಲ್ಪ ಮಾನವರು ಮಾತ್ರ ಆಗಬಾರದು

ಬೆಂಗಳೂರು ನ 16: ಸಂವಿಧಾನ ಮತ್ತು ಶರಣ ಸಾಹಿತ್ಯದ ಆಶಯ ಒಂದೇ ಆಗಿದೆ. ಜಾತಿ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಇವೆರಡರ ಗುರಿಯೂ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹದಿನೆಂಟನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಮಾಡಿ, ಎಸ್.ಷಡಕ್ಷರಿ ಅವರ “ಕ್ಷಣ ಹೊತ್ತು ಅಣಿಮುತ್ತು” ಕೃತಿಯನ್ನು ಬಿಡುಗಡೆ ಮಾತನಾಡಿದರು.

ಸಂವಿಧಾನ ವಿರೋಧಿಗಳು ಶರಣ ಸಾಹಿತ್ಯವನ್ನೂ ಒಪ್ಪುವುದಿಲ್ಲ. ಇಂಥಾ ಸಂವಿಧಾನ ವಿರೋಧಿಗಳನ್ನು ನಾವು ದೂರ ಇಡಬೇಕು. ಸಮಾಜದ ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸುವ ಮೂಲಕ ಬಸವಾದಿ ಶರಣರ ಆಶಯದ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಶರಣರು ನುಡಿದಂತೆ ನಡೆದವರು. ನಾವೂ ಆ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

ಅಖಿಲ‌ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಬೇಡಿಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಚನ ಸಂಸ್ಕೃತಿ ಅಂದರೆ ಮಾನವೀಯ ಸಂಸ್ಕೃತಿ. ಮಾನವೀಯ ಬದಲಾವಣೆಯನ್ನು ಸಮಾಜದಲ್ಲಿ ತರಲು ಬಸವಾದಿ ಶರಣರು ಹೋರಾಟ ಮಾಡಿದರು. ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಕಾರಣಕ್ಕೆ ಬಡತನ ಮತ್ತು ತಾರತಮ್ಯ ಹೆಚ್ಚಾಯಿತು. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಮೇಲು ಕೀಳಿನ , ಜಾತಿ ತಾರತಮ್ಯದ ವ್ಯವಸ್ಥೆಯನ್ನು ಅಳಿಸಿ ಮನುಷ್ಯರಾಗಿ ಬಾಳುವುದೇ ಅತ್ಯುನ್ನತ ಧರ್ಮ ಎಂದು ಸಾರಿದರು. ನಾವು ವಿಶ್ವ ಮಾನವರಾಗದಿದ್ದರೂ ಬೇಡ, ಅಲ್ಪ ಮಾನವರಾಗಬಾರದು ಎಂದರು.

ದ್ವೇಷ, ವೈರತ್ವ , ಸೇಡು ಮನುಷ್ಯನ ಗುಣ ಅಲ್ಲ.‌ ಪ್ರಾಣಿಗಳನ್ನು ಪ್ರೀತಿಸುವ ನಾವು ಮನುಷ್ಯರನ್ನು ಜಾತಿ-ಧರ್ಮದ ಕಾರಣಕ್ಕೆ ದ್ವೇಷಿಸುತ್ತೀವಿ. ಇದು ಅತ್ಯಂತ ಅನಾಗರಿಕ ಎಂದು ವಿವರಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ, ಸಾಹಿತಿ ಗೋ.ರು.ಚನ್ನಬಸಪ್ಪ , ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಷಡಕ್ಷರಿ, ಸಂಪಾದಕರುಗಳಾದ ವಿಶ್ವೇಶ್ವರ್ ಭಟ್ ಮತ್ತು ರವಿ ಹೆಗಡೆ , ಲೇಖಕಿ ವೀಣಾ ಬನ್ನಂಜೆ, ಮನು ಬಳಿಗಾರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಭಾಜಪ ದ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ

ಭಾಜಪ ದ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ

ಭಾಜಪ ದ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ

ಬೆಂಗಳೂರು,15.  ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ  ನೇಮಕಗೊಂಡಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ಪದಗ್ರಹಣ

ಸಮಾರಂಭ ಜರುಗಿತು. ಪದಗ್ರಹಣ ಮಾಡಿ ಮಾತನಾಡಿದ  ನೂತನ ಅಧ್ಯಕ್ಷರು ಎಲ್ಲರನ್ನೂ  ಒಟ್ಟಿಗೆ ತೆಗೆದುಕೊಂಡು ಹೋಗಿ ಎಲ್ಲರ ವಿಶ್ವಾಸ  ಉಳಿಸಿಕೊಳ್ಳುತ್ತೇನೆ. ಎಲ್ಲ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸ  ಇಟ್ಟು ಪಕ್ಷ ಅಧಿಕಾರ ನೀಡಿದೆ.  ಆ ವಿಶ್ವಾಸವನ್ನು  ಉಳಿಸಿಕೊಳ್ಳುತ್ತೇನೆ.

ಸಮಾರಂಭದಲ್ಲಿ ಪಕ್ಷದ ಹಿರಿಯರು ಹಾಗೂ ಮಾಜಿ ಸಭಾಪತಿ ಡಿ ಹೆಚ್ ಶಂಕರಮೂರ್ತಿ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಮಾಜಿ ಸಚಿವರಾದ ರಾಮಚಂದ್ರೇಗೌಡ ಅವರು, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಹಾಗೂ ಮಾಜಿ ಸಚಿವರು, ಶಾಸಕರು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಅಭಿವೃದ್ಧಿ  ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು

ರಾಜ್ಯ ಮಟ್ಟದ ಅಭಿವೃದ್ಧಿ  ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು

ರಾಜ್ಯ ಮಟ್ಟದ ಅಭಿವೃದ್ಧಿ  ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು

ಮೈಸೂರು 15. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನೆ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡ ಜಯಂತಿ ಹಾಗೂ ಜನಜಾತಿ ಗೌರವ ದಿವಸ -2023 ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗಹವಹಿಸಿ, ಅಭಿವೃದ್ಧಿ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ನವೆಂಬರ್ 15 ರಂದು ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ದೇಶದಾದ್ಯಂತ ಬುಡಕಟ್ಟು ಹೆಮ್ಮೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಯಿಂದ ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಎಲ್ಲಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಮತ್ತು ಅವರ ಪ್ರಯತ್ನಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಬಿರ್ಸಾ ಮುಂಡಾ ಅವರ ಜನ್ಮದಿನದಂದು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು  ಬಿರ್ಸಾ ಮುಂಡಾ ಅವರ ಪಾವನಸ್ಥಳದಿಂದ ಅಭಿವೃದ್ಧಿಪಡಿಸಿದ ಭಾರತ ಸಂಕಲ್ಪ ಯಾತ್ರೆಯನ್ನು ಧ್ವಜಾರೋಹಣ ಮಾಡುವ ಮೂಲಕ ಭಾರತ್ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸುತ್ತಿದ್ದಾರೆ. ಈ ಸಂಕಲ್ಪ ಯಾತ್ರೆಯು ಜನವರಿ 25 ರವರೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹಾದುಹೋಗುತ್ತದೆ. ಈ ಸಮಯದಲ್ಲಿ, ಪ್ರಧಾನಿ ಮೋದಿ ಅವರು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಒಟ್ಟಾರೆ ಅಭಿವೃದ್ಧಿಯ ಉದ್ದೇಶಕ್ಕಾಗಿ 24 ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಾರಂಭಿಸುತ್ತಾರೆ. ಅಲ್ಲದೆ, 18 ಸಾವಿರ ಕೋಟಿ ರೂಪಾಯಿ ಮೌಲ್ಯದ ಪಿಎಂ-ಕಿಸಾನ್ ಯೋಜನೆಯ 15 ನೇ ಕಂತು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂಕಲ್ಪ ಯಾತ್ರೆಯು 2047 ರ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಯಾತ್ರೆಯ ಮೂಲಕ, ರಾಜ್ಯ ಸರ್ಕಾರದ ಯೋಜನೆಗಳು ಮತ್ತು ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ದುರ್ಬಲ ಜನಸಂಖ್ಯೆಗೆ ತಲುಪಿಸುವ ಪ್ರಯತ್ನವಿದೆ ಎಂದು ಹೇಳಿದರು.

ಆಯುಷ್ಮಾನ್ ಭಾರತ್, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜಲ ಜೀವನ್ ಮಿಷನ್,ಜನ್ ಧನ್ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಮತ್ತು ಪಿಎಂ ಪೋಶನ್ ಅಭಿಯಾನ ಮುಂತಾದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಮತ್ತು ಯೋಜನೆಗೆ ಅರ್ಹರಾಗಿದ್ದರೂ ಯೋಜನೆಯ ಪ್ರಯೋಜನಗಳನ್ನು ಪಡೆಯದ ಅಂತಹ ಜನರನ್ನು ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಪ್ರಯತ್ನವಿದೆ. ಇದರೊಂದಿಗೆ, ರಾಜ್ಯದ ನಗರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನಗರಾಭಿವೃದ್ಧಿ ಇಲಾಖೆಯ ಯೋಜನೆಗಳ ಪ್ರಯೋಜನಗಳನ್ನು ಸಾರ್ವಜನಿಕ ಜಾಗೃತಿಯ ಮೂಲಕ ವಂಚಿತ, ದುರ್ಬಲ ಮತ್ತು ಅರ್ಹ ಜನರಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯ ಉದ್ದೇಶವು ಯೋಜನೆಗಳ ಪ್ರಯೋಜನಗಳನ್ನು ಕೊನೆಯ ವ್ಯಕ್ತಿಗೆ ತಲುಪಿಸುವಲ್ಲಿ  ಹಾಗೂ ಬುಡಕಟ್ಟು ಸಮುದಾಯದ ಹಿತದೃಷ್ಟಿಯಿಂದ ಆಯೋಜಿಸಲಾದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯಶಸ್ವಿಗೊಳಿಸಲು ಕೈಜೋಡಿಸಿ ಎಂದು ಕರೆ ನೀಡಿದರು.

ಗೌರವಾನ್ವಿತ ಬಿರ್ಸಾ ಮುಂಡಾ ಅವರ ಜನ್ಮ ದಿನದ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದ ಅವರು ಸರ್ವರಿಗೂ ಜನ ಜಾತಿ ಗೌರವ ದಿನದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಮೇಯರ್ ಶಿವಕುಮಾರ್, ಕೇಂದ್ರ ಪ್ರೆಸ್ ಇನ್ಫಾರ್ಮಶನ್ ಬ್ಯುರೋ ಅಪರ ಪ್ರದಾನ ನಿರ್ದೇಶಕರಾದ ರವೀಂದ್ರ, ಕೇಂದ್ರ ಜಲಶಕ್ತಿ ನಿರ್ದೇಶಕರಾದ ವಿನಾಯಕ್ ಭಟ್, ದೂರದರ್ಶನದ ಡಿಡಿಜಿ ಅನಿಲ್ ಕುಮಾರ್, ಜಿಲ್ಲಾಧಿಕಾರಿ ರಾಜೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕೆ ವಿ ಪ್ರಭಾಕರ್ ರವರಿಗೆ ಬೆಳಗಾವಿಯಲ್ಲಿ ಅಭಿಮಾನದ ಅಭಿನಂದನೆ

ಕೆ ವಿ ಪ್ರಭಾಕರ್ ರವರಿಗೆ ಬೆಳಗಾವಿಯಲ್ಲಿ ಅಭಿಮಾನದ ಅಭಿನಂದನೆ

ಕೆ ವಿ ಪ್ರಭಾಕರ್ ರವರಿಗೆ ಬೆಳಗಾವಿಯಲ್ಲಿ ಅಭಿಮಾನದ ಅಭಿನಂದನೆ

ಪತ್ರಕರ್ತರು ತಮ್ಮ ಮತ್ತು ಕುಟುಂಬದ ಕಾಳಜಿ ವಹಿಸಿ: ಕೆ.ವಿ.ಪ್ರಭಾಕರ್

ಬೆಳಗಾವಿ ನ 11: ಪತ್ರಕರ್ತರು ಒತ್ತಡದ ಬದುಕಿನಿಂದ ಹೊರ ಬಂದು ತಮ್ಮ ಮತ್ತು ಕುಟುಂಬದ ಆರೋಗ್ಯದ ಕಡೆ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪತ್ರಕರ್ತರ ಸಮುದಾಯದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ಮಾಸಾಶನ ಹೆಚ್ಚಳ ಸೇರಿ ಹಲವು ಬೇಡಿಕೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ನೀಡಬೇಕು ಎನ್ನುವ ಬೇಡಿಕೆ ಕುರಿತಾಗಿ ಇಲಾಖೆಯಿಂದ ಒಂದು ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಮುಂದಿನ ಬಜೆಟ್ ನಲ್ಲಿ ಈ ಬೇಡಿಕೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ,  ರಾಜ್ಯ ಉಪಾಧ್ಯಕ್ಷ  ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಮಹಾನಗರ ಪಾಲಿಕೆ ಕಮಿಷ್ನರ್ ಅಶೋಕ ದುಡಗುಂಟಿ, ಸರ್ವೋತ್ತಮ ಜಾರಕಿಹೊಳಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರನ್ನೂ ಸನ್ಮಾನಿಸಲಾಯಿತು. 150 ಮಂದಿ ಹಿರಿಯ ಪತ್ರಿಕಾ ವಿತರಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೈಕಲ್ ಗಳನ್ನು ವಿತರಿಸಿದರು.‌

ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ತಂಡದ ಗಿರೀಶ್ ಕೋಟೆ, ಕೆ ಪಿ ಪುಟ್ಟಸ್ವಾಮಯ್ಯ, ಎಮ್ ಕೆ ಹೆಗಡೆ , ದೀಪಕ್ ಕರಾಡೆ, ಕೆ ಎಸ್ ನಾಗರಾಜ್  ರವರಿಗೂ  ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.