ದೇವರಾಜ ಅರಸು ಅವರ ಕಾರ್ಯಕ್ರಮಗಳ ಫಲಾನುಭವಿಗಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇವರಾಜ ಅರಸು ಅವರ ಕಾರ್ಯಕ್ರಮಗಳ ಫಲಾನುಭವಿಗಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಅವರು ಭವಿಷ್ಯದ ಭಾರತ ಮತ್ತು ಭವಿಷ್ಯದ ಸಮಾಜ ಹೇಗಿರಬೇಕು ಎನ್ನುವ ಸಾಮಾಜಿಕ ನ್ಯಾಯದ ಕನಸು-ಕಾರ್ಯಕ್ರಮಗಳನ್ನು ರೂಪಿಸಿದ ಮಹಾನ್ ಚೇತನಗಳು-  ಮುಖ್ಯಮಂತ್ರಿ ಸಿದ್ದರಾಮಯ್ಯ

ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ಅರಸು ಅವರ ವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ

ದೇವರಾಜ ಅರಸು ಅವರ ಕಾರ್ಯಕ್ರಮಗಳ ಫಲಾನುಭವಿಗಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಆ: ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲವ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ಸಮೂಹಕ್ಕೆ ಕರೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ದೇವರಾಜು ಅರಸು ಅವರ 108 ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಅರಸು ಪ್ರಶಸ್ತಿ ವಿತರಿಸಿ ಮಾತನಾಡಿದರು.

ಕನ್ನಡ ನೆಲ ಸಾಮಾಜಿಕ ನ್ಯಾಯವನ್ನು ಕ್ರಾಂತಿಕಾರಿಯಾಗಿ ಜಾರಿ ಮಾಡಿದ ಇತಿಹಾಸ ಹೊಂದಿದೆ. ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸು ಅವರ ವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ.‌

ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು ಎನ್ನುವ ಆಶಯ ಬಸವಣ್ಣನವರ ಕಾಲದಿಂದಲೂ ಈ ನೆಲದಲ್ಲಿ ನೆಲೆಯೂರಿದೆ.

ದೇವರಾಜ ಅರಸರು ಜಾರಿಗೆ ತಂದಿದ್ದು, ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ ಈಗ ಬಿಜೆಪಿ ಬಂದ ಮೇಲೆ “ಉಳ್ಳವನೇ ಭೂಮಿ ಒಡೆಯ” ಎನ್ನುವಂತಾಗಿದೆ ಎಂದು ಟೀಕಿಸಿದರು.

ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಈಗಿನ ಪೀಳಿಗೆಯ ಯುವಕ, ಯುವತಿಯರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದರು.

ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇದ್ದರೂ ಅದು ಜಾರಿ ಆಗಿರಲಿಲ್ಲ. ರಾಜ್ಯದಲ್ಲಿ ದೇವರಾಜು ಅರಸರು‌ ಮುಖ್ಯಮಂತ್ರಿಯಾಗಿ ಹಾವನೂರು ವರದಿ ತರಿಸಿಕೊಂಡು ಅದನ್ನು ಜಾರಿ ಮಾಡುವ ಎದೆಗಾರಿಕೆ ತೋರಿಸಿದರು. ಹೀಗೆ ಮಾಡುವಾಗ ಎಲ್ಲಾ ಜಾತಿ-ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಆ ಮೂಲಕ ಸಂವಿಧಾನಬದ್ದವಾದ ಮೀಸಲಾತಿಯನ್ನು ಕನ್ನಡ ನೆಲದಲ್ಲಿ ಜಾರಿ ಮಾಡಿದರು ಎಂದು ವಿವರಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್ ತಂಗಡಗಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ , ಶಾಸಕ ಗೋಪಾಲಕೃಷ್ಣ ಬೇಳೂರು, ನಾಗರಾಜ ಯಾದವ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಕ್ರಾಂತಿ ಕಾರಿ ಜನಪದ ಗಾಯಕ, ಹೋರಾಟಗಾರ ಆಂಧ್ರದ ಗದ್ದರ್  ಕಣ್ಮರೆ

ಕ್ರಾಂತಿ ಕಾರಿ ಜನಪದ ಗಾಯಕ, ಹೋರಾಟಗಾರ ಆಂಧ್ರದ ಗದ್ದರ್ ಕಣ್ಮರೆ

ಕ್ರಾಂತಿ ಕಾರಿ ಜನಪದ ಗಾಯಕ, ಹೋರಾಟಗಾರ ಆಂಧ್ರದ ಗದ್ದರ್ ಕಣ್ಮರೆ

ಹೈದ್ರಾಬಾದ್, ಕೆಲ ದಿನಗಳಿಂದ ಹೈದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಆಂಧ್ರದ ಕವಿ, ಜನಪದ ಗಾಯಕ ಹೋರಾಟಗಾರ ಗದ್ದರ್ ಅವರು ಇಂದು ಹೈದ್ರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆಂಧ್ರಪ್ರದೇಶದ ಮೇದರ ಜಿಲ್ಲೆಯ ತೊಪರಾನ ಗ್ರಾಮದಲ್ಲಿ 1949ರಲ್ಲಿ ಜನಸಿದ್ದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್ ಬಡತನದಲ್ಲಿಯೇ ಬಾಲ್ಯಗಳನ್ನು ಕಳೆದ ಗದ್ದರ್ ನಿಜಾಮಾಬಾದ್ ನಲ್ಲಿ ಶಿಕ್ಷಣ ಮುಗಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವತಃ ಹಾಡು ಬರೆದು ಹಾಡುತ್ತಿದ್ದರು, ಹಲವಾರು ಸಿನೇಮಾಗಳಲ್ಲಿ ಕೂಡ ನಟಿಸಿದ್ದರು. ಸಾಮಾಜಿಕ ಹೋರಾಟದಲ್ಲಿ ಹೆಸರು ಮಾಡಿದ್ದ ಗದ್ದರ್ ಇನ್ನೂ ನೆನಪು ಮಾತ್ರ.

ಉಸಿರು ನಿಲ್ಲಿಸಿದ  ಹಸಿರು ಕ್ರಾಂತಿ ಸಂಸ್ಥಾಪಕ ಸಂಪಾದಕರಾದ  ಕಲ್ಯಾಣರಾವ್ ಮುಚಳಂಬಿ.

ಉಸಿರು ನಿಲ್ಲಿಸಿದ ಹಸಿರು ಕ್ರಾಂತಿ ಸಂಸ್ಥಾಪಕ ಸಂಪಾದಕರಾದ ಕಲ್ಯಾಣರಾವ್ ಮುಚಳಂಬಿ.


ಬೆಳಗಾವಿ – ಗಡಿ ಜಿಲ್ಲೆ ಬೆಳಗಾವಿಯಲ್ಲಿ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿರವರ ಅಂತ್ಯಕ್ರಿಯೆ ಬೆಳಗಾವಿಯ ಸದಾಶಿವ ನಗರ ಸ್ಮಶಾನದಲ್ಲಿ ಲಿಂಗಾಯತ ಸಂಪ್ರದಾಯದAತೆ ಸಕಲ ಗೌರವಗಳೊಂದಿಗೆ ನೆರವೇರಿತು. ದಿನಾಂಕ 6ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಮಠಕ್ಕೆ ಹರಕೆ ಪಾದಯಾತ್ರೆ ಹೋಗುವ ವೇಳೆ ತೀವ್ರ ಅಸ್ವಸ್ಥರಾಗಿ ಕೊನೆಯುಸಿರೆಳಿದಿದ್ದ ಕಲ್ಯಾಣರಾವ್ ಮುಚಳಂಬಿ ಅಂತ್ಯಕ್ರಿಯೆ 7ನೇ ತಾರೀಕಿನಂದು ನೆರವೇರಿತು. ಬೆಳಗ್ಗೆ 6 ಗಂಟೆಯಿAದ 11 ಗಂಟೆಯವರೆಗೂ ಬೆಳಗಾವಿಯ ಆಂಜನೇಯ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಬೆಳಗಾವಿಯ ಆಂಜನೇಯ ನಗರ ನಿವಾಸದಿಂದ ಎಸ್.ಬಿ.ಸಿದ್ನಾಳ್ ವೃತ್ತದ ಮಾರ್ಗವಾಗಿ ಮಹಾಂತೇಶ ನಗರ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯವರೆಗೂ ಮೆರವಣಿಗೆ ಸಾಗಿತು. ಸದಾಶಿವನಗರದ ರುದ್ರಭೂಮಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮವೇ ನೆರೆದಿತ್ತು.

ಗದಗದ ಜಗದ್ಗುರು ಡಾ.ತೊಂಟದ ಸಿದ್ಧರಾಮ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು, ಸಾವಳಗಿ ಸಿದ್ಧಸಂಸ್ಥಾನಮಠದ ಕುಮಾರೇಂದ್ರ ಜಗದ್ಗುರುಗಳು, ಕಾರಂಜಿಮಠ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾಜು೯ನ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಘಟಪ್ರಭಾದ ಶ್ರೀ ವಿರುಪಾಕ್ಷ ದೇವರು, ಶ್ರೀ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮಿಗಳು ಸುತಗಟ್ಟಿ ಶಿವಾಪೂರ ಸೇರಿದಂತೆ ವಿವಿಧ ಮಠಾಧೀಶರು ಕಲ್ಯಾಣರಾವ್ ಮುಚಳಂಬಿರವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಬೆಳಗಾವಿ ಸಂಸದೆ ಶ್ರೀಮತಿ ಮಂಗಲಾ ಅಂಗಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನೀಲ ಬೆನಕೆ, ಮಾಜಿ ಸಚಿವರಾದ ಶಶಿಕಾಂತ ನಾಯ್ಕ್, , ಎ.ಬಿ.ಪಾಟೀಲ, ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ರುದ್ರಣ್ಣ ಚಂದರಗಿ, ಮಾಜಿ ಮೇಯರ ನಿಂಗಪ್ಪ ನಿರ್ವಾಣಿ, ಜೆಡಿಎಸ್ ನಾಯಕ ಅಶೋಕ ಪೂಜಾರಿ, ಸ್ಥಳೀಯ ಕಾರ್ಪೊರೇಟರ್ ರಾಜಶೇಖರ್ ಡೋಣಿ, ಭಾರತ ಸೇವಾದಳ ರಾಜ್ಯ ಉಪದಳಪತಿ ಬಸವರಾಜ ಹಟ್ಟಿಗೌಡರ ಉಪಸ್ಥಿತರಿದ್ದರು. ರೈತ ಮುಖಂಡರಾದ ಲಿಂಗರಾಜ ಪಾಟೀಲ, ಶಿವನಗೌಡ ಪಾಟೀಲ, ಸಿದಗೌಡ ಮೋದಗಿ, ಶಿವಪುತ್ರಪ್ಪ ಜಕಬಾಳ, ರಾಮಣ್ಣ ಹುಕ್ಕೇರಿ, ಚೂನಪ್ಪ ಪೂಜೇರಿ,ಮಲ್ಲಿಕಾಜು೯ನ ವಾಲಿ, ಅಪ್ಪಾಸಾಹೇಬ್ ದೇಸಾಯಿ, ಬಸಪ್ಪ ಕಪ್ಪಲಗುದ್ದಿ, ಭೀಮಶಿ ಕಡಾಡಿ, ರಾವಸಾಹೇಬ್ ಬೆಳಕೂಡ್, ಬಾಳಪ್ಪ ಪಾಟೀಲ್, ರಾಜಕುಮಾರ್ ಜಂಬಗಿ, ರಮೇಶ್ ಬೆಳಕೂಡ್, ಸುರೇಶ್ ಕಾಡದೇವರ, ರಮೇಶ್ ತುಕ್ಕಾನಟ್ಟಿ, ಕಲಗೌಡ ಪಾಟೀಲ್ ಅಗಸಗಾ, ಪರ್ವತಗೌಡ ಬಾಬಾಗೌಡ ಪಾಟೀಲ್ ಚಿಕ್ಕಬಾಗೇವಾಡಿ, ಟಬ್ಬಗೌಡ ಪಾಟೀಲ್ ಚಿಕ್ಕೋಡಿ ಸೇರಿ ಹಲವು ರೈತ ನಾಯಕರು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ, ಆಶಾ ಯಮಕನಮರಡಿ, ಲಿಂಗಾಯತ ಸಂಘಟನೆಯ ಶಂಕರ ಗುಡಸ, ಆನಂದ ಗುಡಸ, ಹೆಚ್. ಬಸವರಾಜ, ಜಗನ್ನಾಥ ಪನಸಾಲೆ, ಬಿರಾಯಿ, ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಭಾವಿ ಅಂತಿಮ ದರ್ಶನ ಪಡೆದರು. ಇನ್ನು ಸಾಹಿತಿಗಳಾದ ಯ.ರು ಪಾಟೀಲ, ಬಸವರಾಜ ಗಾರಗಿ, ಚಿತ್ರ ನಟ ಸಿ.ಕೆ.ಮೆಕ್ಕೇದ, ಜಲತ್ಕುಮಾರ್ ಪುಣಜಗೌಡ, ಸ.ರಾ.ಸುಲಕೂಡೆ, ಎಸ್.ಎಸ್.ಪಾಟೀಲ್, ಎಸ್.ಎಸ್. ಹಿರೇಮಠ, ಸಿ.ಎಂ.ಬೂದಿಹಾಳ, ಎಂ.ವೈ.ಮೆಣಸಿನಕಾಯಿ, ನಿವೃತ್ತ ಪ್ರಾಚಾರ್ಯ ಎಸ್ ಬಿ ಚೋಬಾರಿ, ಶಿವಕುಮಾರ ಕಟ್ಟಿಮನಿ, ಸುರೇಶ ಪಾಟೀಲ, ಸುರೇಶ ಕಾಡದವರ, ಮಹಾಂತೇಶ ತಾಂವಶಿ, ಗಣುಸಿಂಘ ರಜಪೂತ , ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ, ಬೆಳಗಾವಿಯ ದಿನಪತ್ರಿಕೆಗಳ ಸಂಪಾದಕರು ಗಳಾದ ಲೋಕದರ್ಶನದ ಶರತ್ಚಂದ್ರ ದೇಸಾಯಿ , ನಾಡೋಜ ದಿನಪತ್ರಿಕೆಯ ಸಲೀಮ್ ಧಾರವಾಡ್ಕಕರ್ , ಲೋಕವಾರ್ತೆ ದಿನಪತ್ರಿಕೆಯ ಹಿರೋಜಿ ಮಾವರ್ಕರ್. ಹಳ್ಳಿಯ ಸಂದೇಶದ ಕುಂತಿನಾಥ ಕಲಮನಿ , ಹಿರಿಯ ಪತ್ರಕರ್ತರಾದ ಎಂ ಎನ್ ಪಾಟೀಲ ,ಅಶೋಕ್ ಜೋಶಿ , ಈಶ್ವರ ಹೂಟಿ, ಪಾರೇಶ ಭೋಸಲೆ , ಶ್ರೀಶೈಲ ಮಠದ, ಮುನ್ನಾ ಬಾಗವಾನ್ , ವಿರೂಪಾಕ್ಷ ಕವಟಗಿ, ಸುಧಾಕರ ತಳವಾರ, ಗಂಗಾಧರ, ಕಟಾವಕರ, ಮೋಹನ ಗಡಾದ, ಬೆಂಗಳೂರು ಪ್ರೆಸ್ ಕ್ಲಬ್ ನಿರ್ದೇಶಕ ಕೆ ಎಸ್ ನಾಗರಾಜ್ , ಕಾಂಗ್ರೇಸ ನಾಯಕರಾದ ಲಖನ ಸಂಸುದ್ದಿ, ಮಾರುತಿ ವಿಜಯನಗರ, ಯಲ್ಲಪ್ಪ ಕಪ್ಪಲಗುದ್ದಿ, ಸುರೇಶ ಕರೋಶಿ, ವೀರ ಶೈವ ಅರ್ಬನ್ ಸಹಕಾರಿಯ ಅಧ್ಯಕ್ಷ ಶ್ರೀಕಾಂತ ಸುತಕಟ್ಟಿ, ನಿರ್ದೇಶಕ ಮಲ್ಲಿಕಾರ್ಜುನ ಬಹುದ್ದೂರ, ಶಿವಲಿಂಗ ಸ್ವಾಮಿ ಅರ್ಜುನ ಸಂಪಗಾರ, ಮೆಹಬೂಬ ಮಕಾನದಾರ, ಮಹಾಂತೇಶ ಕುರಬೇಟ ರಮೇಶ ಮಗದುಮ್ಮ ಸೇರಿದಂತೆ ಅಭಿಮಾನಿಗಳು, ರೈತ ಹಿರಿಯಾಳುಗಳು ಪಾಲ್ಗೊಂಡಿದ್ದರು. ಸ್ಥಳೀಯ ಮತ್ತು ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸ್ಥಳೀಯ ಜನಪ್ರತಿನಿಧಿಗಳು , ಮುಚಳಂಬಿಯವರ ಸಂಬAಧಿಕರು ಬಂಧು ಬಳಗದವರು ಭಾಗವಹಿಸಿದ್ದರು.ಮಲ್ಲಾಪೂರ , ಘಟಪ್ರಭಾ . ಗೋಕಾಕ, ಶಿವಾಪೂರ, ಕೊಳವಿ, ಅಕ್ಕತಂಗೇರಹಾಳ, ಬೆಳಗಾವಿ, ಗುಲಬರ್ಗಾ, ಕಲ್ಲೋಳ್ಳಿ, ಯ ದಿವಂಗತರ ಅತ್ಮೀಯರು ಭಾಗವಹಿಸಿದ್ದರು . ಕುಂತಿನಾಥ ಕಲಮನಿ , ಹಿರಿಯ ಪತ್ರಕರ್ತರಾದ ಎಂ ಎನ್ ಪಾಟೀಲ ,ಅಶೋಕ್ ಜೋಶಿ , ಈಶ್ವರ ಹೂಟಿ, ಪಾರೇಶ ಭೋಸಲೆ , ಶ್ರೀಶೈಲ ಮಠದ, ಮುನ್ನಾ ಬಾಗವಾನ್ , ವಿರೂಪಾಕ್ಷ ಕವಟಗಿ, ಸುಧಾಕರ ತಳವಾರ, ಗಂಗಾಧರ, ಕಟಾವಕರ, ಮೋಹನ ಗಡಾದ, ಬೆಂಗಳೂರು ಪ್ರೆಸ್ ಕ್ಲಬ್ ನಿರ್ದೇಶಕ ಕೆ ಎಸ್ ನಾಗರಾಜ್ , ಕಾಂಗ್ರೇಸ ನಾಯಕರಾದ ಲಖನ ಸಂಸುದ್ದಿ, ಮಾರುತಿ ವಿಜಯನಗರ, ಯಲ್ಲಪ್ಪ ಕಪ್ಪಲಗುದ್ದಿ, ಸುರೇಶ ಕರೋಶಿ, ವೀರ ಶೈವ ಅರ್ಬನ್ ಸಹಕಾರಿಯ ಅಧ್ಯಕ್ಷ ಶ್ರೀಕಾಂತ ಸುತಕಟ್ಟಿ, ನಿರ್ದೇಶಕ ಮಲ್ಲಿಕಾರ್ಜುನ ಬಹುದ್ದೂರ, ಶಿವಲಿಂಗ ಸ್ವಾಮಿ ಅರ್ಜುನ ಸಂಪಗಾರ, ಮೆಹಬೂಬ ಮಕಾನದಾರ, ಮಹಾಂತೇಶ ಕುರಬೇಟ ರಮೇಶ ಮಗದುಮ್ಮ ಸೇರಿದಂತೆ ಅಭಿಮಾನಿಗಳು, ರೈತ ಹಿರಿಯಾಳುಗಳು ಪಾಲ್ಗೊಂಡಿದ್ದರು. ಸ್ಥಳೀಯ ಮತ್ತು ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸ್ಥಳೀಯ ಜನಪ್ರತಿನಿಧಿಗಳು , ಮುಚಳಂಬಿಯವರ ಸಂಬAಧಿಕರು ಬಂಧು ಬಳಗದವರು ಭಾಗವಹಿಸಿದ್ದರು.ಮಲ್ಲಾಪೂರ , ಘಟಪ್ರಭಾ . ಗೋಕಾಕ, ಶಿವಾಪೂರ, ಕೊಳವಿ, ಅಕ್ಕತಂಗೇರಹಾಳ, ಬೆಳಗಾವಿ, ಗುಲಬರ್ಗಾ, ಕಲ್ಲೋಳ್ಳಿ, ಯ ದಿವಂಗತರ ಅತ್ಮೀಯರು ಭಾಗವಹಿಸಿದ್ದರು .
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಿಲ್ಲೆಯ ಓರ್ವ ರೈತ ಹೋರಾಟಗಾರರು ಮತ್ತು ರೈತ ಚಿಂತಕರು ಆಗಿದ್ದ ಕಲ್ಯಾಣರಾವ್ ಮುಚಳಂಬಿ ಅವರು ನಿಧನರಾಗಿದ್ದು ನಮಗೆ ತೀವ್ರ ಆಘಾತವಾಗಿದೆ. ರೈತ ಮುಖಂಡ ಪ್ರೊ ನಂಜುಂಡಸ್ವಾಮಿ ಅವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ರೈತರ ಹೋರಾಟಗಳು ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಸಿರು ಕ್ರಾಂತಿ ಪತ್ರಿಕೆಯನ್ನು ಹುಟ್ಟು ಹಾಕಿ ಓರ್ವ ಪತ್ರಕರ್ತರಾಗಿಯೂ ಯಶಸ್ವಿ ಯಾಗಿದ್ದರು ಎಂದು ಸ್ಮರಿಸಿಕೊಂಡರು. ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಮಾತನಾಡಿ ಕಲ್ಯಾಣರಾವ್ ಮುಚಳಂಬಿ ಅವರ ನಿಧನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಇಡೀ ರೈತರಿಗೆ ದೊಡ್ಡ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.