ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ  ಶ್ರೀ ಶಿವಾನಂದ ತಗಡೂರು

ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ ಶ್ರೀ ಶಿವಾನಂದ ತಗಡೂರು

ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳು
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.
ವಿಜಯಪುರದಲ್ಲಿ ನಡೆಯುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿಗಳ ವಿವರ:
೧.ಜಿ.ನಾರಾಯಣ ಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ):
ಮಂಜುನಾಥ ಜೂಟಿ, ವಿಜಯ ಕರ್ನಾಟಕ, ಕಲಬುರಗಿ
ಕಲಾವತಿ ಬೈಚಬಾಳ, ಪ್ರಜಾವಾಣಿ, ಧಾರವಾಡ.

೨.ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ): ವೈ.ಗ.ಜಗದೀಶ್, ಪ್ರಜಾವಾಣಿ, ಬೆಂಗಳೂರು.
ಕೂಡ್ಲಿ ಗುರುರಾಜ್, ಉದಯವಾಣಿ, ಮೈಸೂರು.

೩.ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ):
ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ.
ಜಿ.ವಿ.ಸುಬ್ಬರಾವ್, ಬಳ್ಳಾರಿ ಬೆಳಗಾಯಿತು ಪತ್ರಿಕೆ, ವಿಜಯನಗರ ಜಿಲ್ಲೆ.

೪.ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
ವಿಜಯಲಕ್ಷ್ಮಿ ಶಿಬರೂರು, ವಿಜಯ ಟೈಮ್ಸ್, ಬೆಂಗಳೂರು.
ಎಲ್.ಎಸ್.ಶ್ರೀಕಾಂತ್, ಕನ್ನಡಪ್ರಭ, ಮೈಸೂರು.

೫.ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ):
ಇಬ್ರಾಹಿಂ ಖಲೀಬ್, ಸುದ್ದಿ ಬಿಡುಗಡೆ, ಪುತ್ತೂರು.
ಎಚ್.ಟಿ.ಪ್ರಸನ್ನ, ಪೊಲೀಸ್ ಬೇಟೆ, ಹಿರಿಯೂರು.

೬.ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ (ವಾರಪತ್ರಿಕೆ ವಿಭಾಗ).
ಡಾ.ಯು.ಬಿ.ರಾಜಲಕ್ಷ್ಮಿ, ಸಂಪಾದಕರು, ತರಂಗ, ಮಣಿಪಾಲ್.
ಶ್ರಿಮತಿ ಎಚ್.ಜಿ.ಶೋಭ, ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ

೭.ನೆಟ್ಟಕಲ್ಲಪ್ಪ ಪ್ರಶಸ್ತಿ, (ಅತ್ಯುತ್ತಮ ಕ್ರೀಡಾ ವರದಿ)

ಅವಿನಾಶ್ ಜೈನಹಳ್ಳಿ, ವಿಜಯವಾಣಿ, ಮೈಸೂರು.
ಸ್ಪಂದನ್ ಕೆ. ಕನ್ನಡ ಪ್ರಭ, ಬೆಂಗಳೂರು.

೮.ಬಂಡಾಪುರ ಮುನಿರಾಜು ಪ್ರಶಸ್ತಿ (ಅತ್ಯುತ್ತಮ ಸುದ್ದಿ ಚಿತ್ರ):
ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಸ್ಟಾರ್ ಆಫ್ ಮೈಸೂರು.
ಕೆ.ಎಸ್.ಶ್ರೀಧರ್, ವಿಜಯ ಕರ್ನಾಟಕ.
ಆರ್.ನಾಗರಾಜ್, ತುಮಕೂರು.

೯.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ವರದಿಗೆ): ಎಸ್.ಎಸ್.ಸಚ್ಛಿತ್, ಹುಣಸೂರು.
ಶ್ರೀನಿವಾಸ.ಪಿ.ಎ., ಹಾಸನ.

೧೦.ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಅತ್ಯುತ್ತಮ ವರದಿಗೆ):
ನಿರಂಜನ ಕಗ್ಗೆರೆ, ಟೈಮ್ಸ್ ಆಫ್ ಇಂಡಿಯಾ.
ಇಮ್ರಾನ್ ವುಲ್ಲಾ, ಪಾವಗಡ, ತುಮಕೂರು.
ಗುರುದತ್ ಭಟ್, ವಿಜಯ ಕರ್ನಾಟಕ, ಬೆಳಗಾವಿ.

೧೧.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ): ಕೆ.ಬಿ.ಜಗದೀಶ್ ಜೇಡುಬೀಟೆ, ಗೋಣಿಕೊಪ್ಪ, ಕೊಡಗು.
ಅಶೋಕ ಸಾಲವಡಗಿ, ಪ್ರಜಾವಾಣಿ, ಯಾದಗಿರಿ.
ಕೆ.ಎಸ್.ಸೋಮಶೇಖರ, ಇಂದುಸಂಜೆ, ಬೆಂಗಳೂರು.

೧೨.ಮಂಡಿಬೆಲೆ ಶಾಮಣ್ಣ ಪ್ರಶಸ್ತಿ (ಗ್ರಾಮೀಣ ವಿಭಾಗ)
ಎಚ್.ಆರ್.ದೇವರಾಜ್, ಕಡೂರು, ಚಿಕ್ಕಮಗಳೂರು ಜಿಲ್ಲೆ. ರಾಘವೇಂದ್ರ ವೆಂಕಟರಾವ್ ಗುಮಾಸ್ತೆ, ಸಂಯುಕ್ತ ಕರ್ನಾಟಕ, ಮುದಗಲ್. ರಾಯಚೂರು ಜಿಲ್ಲೆ. ಸದಾಶಿವ ರಾಮಪ್ಪ ಬಡಿಗೇರ, ರಾಯಬಾಗ, ಬೆಳಗಾವಿ ಜಿಲ್ಲೆ.

೧೩. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ:
ಎನ್.ಬಿ.ನಾರಾಯಣ, ಮಂಗಳ ಪತ್ರಿಕೆ
ಆರ್.ಜಿ.ಹಳ್ಳಿ ನಾಗರಾಜ್, ಬೆಂಗಳೂರು. ಗಂಗಾಧರ ಕುಷ್ಟಗಿ, ಲಂಕೇಶ್ ಪತ್ರಿಕೆ.
ಪುಟ್ಟಸ್ವಾಮರಾಧ್ಯ, ಬೆಂಗಳೂರು.

೧೪.ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ):
ರಾಜು ಖಾರ್ವಿ, ಉದಯವಾಣಿ, ಬೆಂಗಳೂರು.
ಕೆ.ಪ್ರಕಾಶ್, ವಿಜಯ ಕರ್ನಾಟಕ, ಮುಳಬಾಗಿಲು.

೧೫.ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ಲೇಖನ)
ಬಿ.ಎನ್.ಮಲ್ಲೇಶ್, ನಗರವಾಣಿ, ದಾವಣಗೆರೆ.
ಪಿ.ಎಸ್.ಗುರು, ಪ್ರಜಾವಾಣಿ.

೧೬.ಅತ್ಯುತ್ತಮ ಪುಟ ವಿನ್ಯಾಸಗಾರರು: ಹರೀಶ್ ಕುಮಾರ್. ಆರ್. ವಿಜಯವಾಣಿ.
ಎಸ್.ಆರ್.ರೋಹಿತ್, ನಾವಿಕ ಪತ್ರಿಕೆ, ಶಿವಮೊಗ್ಗ.

೧೭.ನ್ಯಾಯಾಲಯ ವಿಭಾಗ:
ಪಿ.ರಾಜೇಂದ್ರ, ಹೊಸದಿಗಂತ.
ಜಗನ್ .ಆರ್., ವಿಜಯವಾಣಿ

೧೮.ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಅತ್ಯುತ್ತಮ ವರದಿ): ಪಿ.ಪಿ.ಕಾಳಯ್ಯ, ಶಕ್ತಿ ದಿನಪತ್ರಿಕೆ, ಕೊಡಗು.
ಬಸವರಾಜ ಭೋಗಾವತಿ, ಮಾನ್ವಿ, ಪ್ರಜಾವಾಣಿ, ರಾಯಚೂರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

 

ರಾಷ್ಟ್ರಪತಿ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ರಾಜ್ಯಪಾಲರು ಭಾಗಿ

ನವದೆಹಲಿ, ನವೆಂಬರ್ : ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳ 51 ನೇ ಸಮ್ಮೇಳನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದ್ದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವರದಿ ಮತ್ತು ರಾಜಭವನದ ಕಾರ್ಯವೈಕರಿಗಳನ್ನು  ಮಂಡಿಸಿದರು ಹಾಗೂ  ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ರಾಜ್ಯಪಾಲರ 51ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳನ್ನು ಸೇರಿದಂತೆ  ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.