by gadi@dmin | Oct 16, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಉಸಿರು ನಿಲ್ಲಿಸಿದ ಅರಭಾವಿ ಪೂಜ್ಯ ಶ್ರೀ ಸಿದ್ದಲಿಂಗ ಶ್ರೀಗಳು
ಘಟಪ್ರಭಾ, 16- ಉತ್ತರ ಕರ್ನಾಟಕದ ಬಡವರ ಮನೆಗಳ ಬೆಳಕಾಗಿದ್ದ ಮತ್ತು ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಅನ್ನ ದಾಸೋಹಕ್ಕೆ ಹೆಸರು ವಾಸಿಯಾದ ಬೆಳಗಾವಿಯ ಗೋಕಾಕ ತಾಲೂಕ ಅರಭಾವಿ ಮಠದ ಶ್ರೀ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ ಪೂಜ್ಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ನಿನ್ನೆ ಹೃದಯಾಘಾತದಿಂದ ಲಿಂಗೈಕ್ಯರಾದರು.
ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಶ್ರೀಗಳು ಉತ್ತರ ಕರ್ನಾಟಕ ಭಾಗದ ಬಡವರ ಪಾಲಿನ ನಿಜವಾದ ದೇವರಾಗಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದ ಶ್ರೀಮಠವು ಎಲ್ಲರ ಪಾಲಿನ ಬೆಳಕಾಗಿತ್ತು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅಪಾರ ಭಕ್ತ ಸಮೂಹ ಹೊಂದಿದ್ದ ಶ್ರೀಗಳಿಗೆ ನಾಡಿನಾದ್ಯಂತ ಹಲವಾರು ಗಣ್ಯ ಮಾನ್ಯರು ಶೋಕ ವ್ಯಕ್ತ ಪಡಿಸುತ್ತಿದ್ದಾರೆ. ಇಂದು ಸಂಜೆ ಅವರ ಅಂತಿಮ ಸಂಸ್ಕಾರ ಜರುಗಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
by gadi@dmin | Oct 12, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾಗಿ ಎಂ ಈರಣ್ಣ ಆಯ್ಕೆ
ಬೆಂಗಳೂರು, ಕರ್ನಾಟಕ ಪ್ರದೇಶ ಕುರುಬರ ಸಂಘದ(ರಿ) ಗಾಂಧಿನಗರ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಶ್ರೀ ಎಂ ಈರಣ್ಣ, ಕಾರ್ಯಾಧ್ಯಕ್ಷರಾಗಿ ಶ್ರೀ ಬಸವರಾಜ್ ಬಸಲಿಗುಂದಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಎಂ ವಿ ಸೋಮಶೇಖರ್ ಖಜಾಂಚಿಯಾಗಿ ಶ್ರೀ ಕೆ ಎಂ ಕೃಷ್ಣಮೂರ್ತಿ, ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
by gadi@dmin | Oct 9, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ನಮ್ಮ ಸಾಧನೆಯನ್ನು ಯಾರಾದರೂ ಗುರುತಿಸಿದಾಗ ಮತ್ತಷ್ಟು ಸಾಧಿಸುವ ಛಲ ಬರುತ್ತದೆ
ಶಿಕ್ಷಣ ನಮ್ಮನ್ನು ಶೋಷಣೆಯಿಂದ ತಪ್ಪಿಸುತ್ತದೆ
ವಿದ್ಯಾರ್ಥಿ ಜೀವನದಲ್ಲೇ ನಾವು ನಮ್ಮ ಮಾದರಿ ವ್ಯಕ್ತಿತ್ವಗಳನ್ನು ಆರಿಸಿಕೊಳ್ಳಬೇಕು: ವಿದ್ಯಾರ್ಥಿಗಳಿಗೆ ಕೆ.ವಿ.ಪ್ರಭಾಕರ್ ಕರೆ
ಕೋಲಾರ ಅ 8: ವಿದ್ಯಾರ್ಥಿ ಜೀವನದಲ್ಲೇ ನಾವು ನಮ್ಮ ಮಾದರಿ ವ್ಯಕ್ತಿತ್ವಗಳನ್ನು ಆರಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಕನಕ ನೌಕರರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಮಾತನಾಡಿದರು.
ನಮಗೆ ಶಿಕ್ಷಣ ದಾಸೋಹಿ ಅಹಲ್ಯಾ ಬಾಯಿ ಹೋಳ್ಕರ್, ದಾಸಶ್ರೇಷ್ಠ ಕನಕದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರುಗಳು ನಮಗೆ ಮಾದರಿ ಆಗಬೇಕು. ಇಡೀ ಸಮಾಜ ಜಾತಿ-ಧರ್ಮದ ಬೇಧವಿಲ್ಲದೆ ಇಂಥ ಮಹನೀಯರನ್ನು ಮಾದರಿಯಾಗಿ ಸ್ವೀಕರಿಸಿದೆ. ನಾವು ಈ ಚಾರಿತ್ರಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತಂತ್ರಜ್ಞಾನ ನಮ್ಮ ತಿಳಿವಳಿಕೆಯನ್ನು, ಜ್ಞಾನವನ್ನು ವಿಸ್ತರಿಸುವಂತಿರಬೇಕು. ಮೊಬೈಲ್ ಮತ್ತಿತರ ತಂತ್ರಜ್ಞಾನವನ್ನು ಇವುಗಳ ಸಾಧ್ಯತೆಗಳನ್ನು ನಮ್ಮ ತಿಳಿವಳಿಕೆ ಮತ್ತು ವಿಚಾರವಂತಿಕೆಯನ್ನು ಹಾಳುಮಾಡಲು ಬಳಸಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಮಕ್ಕಳು ಸಮಾಜದಲ್ಲಿ ಎದೆ ಎತ್ತಿ ನಿಲ್ಲಬೇಕು ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಯ ಕನಸಾಗಿರುತ್ತದೆ. ಇದಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಓದಿಸುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ತಂದೆ ತಾಯಿಯರ ಕಣ್ಣಲ್ಲಿ ನೀರು ಹಾಕುತ್ತಾರೆ. ಇದನ್ನೆಲ್ಲಾ ಮಕ್ಕಳು ಗಮನಿಸಬೇಕು. ಜವಾಬ್ದಾರಿಯುತವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಮೈಸೂರು ಕಾಗಿನೆಲೆ ಶ್ರೀ ಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಪುರಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕನಕ ನೌಕರರ ಸಂಘದ ಅಧ್ಯಕ್ಷರಾದ ಬಿ.ಎಂ.ನಾರಾಯಣಸ್ವಾಮಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ವಿವಿಯ ಉಪ ಕುಲಪತಿಗಳೂ , ಸಮಾಜದ ಹಿರಿಯರೂ ಆದ ಬಿ.ಕೆ.ರವಿ ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
by gadi@dmin | Oct 9, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರ ಅನಿರೀಕ್ಷಿತ ಭೇಟಿ
ಬೆಂಗಳೂರು ಅ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಅನಿರೀಕ್ಷಿತವಾಗಿ ಭೇಟಿಯಾದರು.
CWC ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ , ಮಂಗಳೂರಿಗೆ ತೆರಳಲು ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಇವರ ಧರ್ಮಪತ್ನಿ ಚನ್ನಮ್ಮ ಅವರು ಅನಿರೀಕ್ಷಿತವಾಗಿ ಮುಖಾಮುಖಿಯಾದರು.
ಈ ವೇಳೆ ಮುಖ್ಯಮಂತ್ರಿಗಳು ದೇವೇಗೌಡರು ಮತ್ತು ಚನ್ನಮ್ಮ ಅವರ ಆರೋಗ್ಯ ವಿಚಾರಿಸಿದರು. ಬಳಿಕ ದೇವೇಗೌಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು.
ಕೆಲ ಕಾಲ ಕುಶಲೋಪರಿ, ಮಾತುಕತೆ ಬಳಿಕ ಪರಸ್ಪರರು ಬೀಳ್ಕೊಟ್ಟರು. ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.
by gadi@dmin | Oct 6, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಬೆಂಗಳೂರು, ತಲಕಾಡು ಹಸ್ತಿಕೇರಿ ಮಠದ
ಡಾ. ಸಿದ್ದ ಮಲ್ಲಿಕಾರ್ಜುನ ಸ್ವಾಮಿಗಳು ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ
ಕೆ. ವಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ ಶ್ರೀ ಮಠದ ಗೌರವ ಸಲ್ಲಿಸಿದರು.