by Gadi Nudi | Jan 19, 2023 | Uncategorized, ಕನ್ನಡ ನಾಡು ನುಡಿ
*ಧರ್ಮಪಥದ ಮೇಲೆ ಸರ್ವಾಧ್ಯಕ್ಷತೆಯ ಹೊಂಬೆಳಕು.
*
*ಶ್ರೀ ಡಿ ಎಸ್ ನಾಯಿಕ*
ಹಿತಮಿತ ಮಧ್ಯಮ ಎತ್ತರದ ನಿಲುವಿನ ಶ್ವೇತಗನ್ನಡಿಯಂತಿರುವ ಧರ್ಮಣ್ಣ ಸಿದ್ದಪ್ಪ ನಾಯಿಕರು ಬಿಳಿ ಅಂಗಿˌಪೈಜಾಮ ಧರಿಸಿ ನಿಂತರೆಂದರೆ ನೋಡಿದವರ ಮನದ ತುಂಬಾ ಭಕ್ತಿಬೆಳದಿಂಗಳು ಸುರಿಯುವುದು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ 29-3-1941 ರಂದು ಸಿದ್ದಪ್ಪˌ ಬಾಗವ್ವರ ಪುಣ್ಯ ಉದರದಲ್ಲಿ ಜನಿಸಿದ ಡಿ.ಎಸ್.ನಾಯಿಕರು ಸಾಮಾನ್ಯನಾಗಿ ಹುಟ್ಟಿ ತ್ರಿವಿಕ್ರಮನಂತೆ ಬೆಳೆದ ಪರಿ ಬೆರಗು ಹುಟ್ಟಿಸುತ್ತದೆ. ಬಾಗೆನಾಡಿನ ಸರ್ವಧರ್ಮಧ್ವಜದಂತಿರುವ ನಾಯಿಕರು ಸರಳತೆˌವಾಗ್ಮಿತೆˌಪ್ರಾಮಾಣಿಕತೆˌವಿನಯತೆˌಸಹಜತೆಗಳ ಅಪೂರ್ವ ಸಂಗಮವಾಗಿದ್ದಾರೆ. ಜನಾನುರಾಗಿಯಾಗಿ ಜನಮೆಚ್ಚಿದ ನಾಯಕರಾಗಿ ಹೊರಹೊಮ್ಮಿ ಗೊಮ್ಮಟವಾಗಿ ತೋರುಬೆರಳಾಗಿದ್ದಾರೆ.
‘ಡಿಪ್ಲೋಮಾ ಇನ್ ಕೋಆಪರೇಶನ್ ‘ಕೋರ್ಸ ಮುಗಿಸಿ ಕುಡಚಿಯಲ್ಲಿ 1962 ರಿಂದ 1969 ರವರೆಗೆ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದಾರೆ.1969 ರಿಂದ ಸಮಾಜ ಸೇವೆಯನ್ನು ತಮ್ಮ ಉಸಿರಾಗಿಸಿಕೊಂಡು ಸಾಂಸ್ಕೃತಿಕˌಸಾಮಾಜಿಕˌಶೈಕ್ಷಣಿಕˌಧಾರ್ಮಿಕˌಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಯಬಾಗ ತಾಲೂಕಿನ ಜಾತ್ಯಾತೀತˌಪ್ರಶ್ನಾತೀತ ನೇತಾರರಾಗಿ ಜನಮನದಲ್ಲಿ ಪೂಜಿಸಲ್ಪಡುತ್ತಿದ್ದಾರೆ.
1978 ರಲ್ಲಿ ಮೊರಬ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕೈಗೊಂಡ ಕಾರ್ಯಗಳು ಅವಿಸ್ಮರಣೀಯ.1973 ರಲ್ಲಿ ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.ಸಾರ್ವಜನಿಕ ಬದುಕಿನಲ್ಲಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ ಮಾಡಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.1981 ರಲ್ಲಿ ಮೊರಬದಲ್ಲಿ ಸಂತೆ ಆರಂಭಿಸಿ ಆರ್ಥಿಕ ವಹಿವಾಟಿಗೆ ಶ್ರೀಕಾರ ಹಾಕಿದ ಡಿ.ಎಸ್ ಅವರು 1982 ರಲ್ಲಿ ಸರಕಾರಿ ಪ್ರೌಢ ಶಾಲೆ ಮಂಜೂರು ಮಾಡಿಸಲು ಹಗಲಿರುಳು ಶ್ರಮಿಸಿ ಯಶಸ್ವಿಯಾದುದು ಇವರ ಶಿಕ್ಷಣ ಪ್ರೇಮಕ್ಕೆ ರನ್ನಗನ್ನಡಿಯಾಗಿದೆ.ಅದೇ ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ ಗ್ರಾಮಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾಗ್ಯವಿಧಾತರಾಗಿದ್ದಾರೆ.1983 ರಲ್ಲಿ ಸರಕಾರಿ ಪಶು ಆಸ್ಪತ್ರೆ ಆರಂಭಿಸುವುದರ ಮೂಲಕ ಗ್ರಾಮದ ಅಭಿವೃದ್ದಿಯ ಚಕ್ರದ ವೇಗ ಹೆಚ್ಚಿಸಿ ಆಧುನಿಕ ಮೊರಬದ ಶಿಲ್ಪಿಯೆನಿಸಿದ್ದಾರೆ.
ಆದರ್ಶಗಳ ಆಕರವಾಗಿರುವ ಡಿ.ಎಸ್.ನಾಯಿಕರವರು 1985 ರಿಂದ ಹಲವು ವರ್ಷಗಳವರೆಗೆ ರೇಡಿಯೋ ಕೇಂದ್ರದಲ್ಲಿ ಭಾಷಣˌಚಿಂತನಗಳನ್ನು ಮಾಡಿ ಶ್ರೋತೃಗಳಿಂದ ಸೈ ಎನಿಸಿಕೊಂಡಿದ್ದಾರೆ.1992 ರಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ.ಸಾಹಿತ್ಯೋಪಾಸಕ ಡಿ.ಎಸ್.ನಾಯಿಕರವರು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಗಮನಾರ್ಹ ಕಾರ್ಯಗೈದಿದ್ದಾರೆ.2000 ದಿಂದ 2005 ರವರೆಗೆ ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.1979 ರಿಂದ ರಾಯಬಾಗತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿ ಭೂನ್ಯಾಯ ಮಂಡಳಿ ಗೌರವ ಹೆಚ್ಚಿಸಿದ್ದಾರೆ.ತಾಲೂಕು ಮಟ್ಟದ ಡಾ.ಅಂಬೇಡ್ಕರ ಜಯಂತಿˌಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಗಳನ್ನು ಗೆಲ್ಲಿಸಿದ್ದಾರೆ.ಪ.ಪೂ ಶ್ರೀ ಸಿದ್ಧೇಶ್ವರ ಸ್ವಾಮಿಗಳು ವಿಜಯಪುರರವರ ಶಿಷ್ಯರಾಗಿ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನೇಕ ಪ್ರವಚನ ಕಾರ್ಯಕ್ರಮಗಳನ್ನು ನೀಡಿ ಆನಂದಿಸಿದ್ದಾರೆ.
‘ಮೊರಬದ ಪುಣ್ಯದ ಕೆನೆ’ˌ’ಧರ್ಮವೀರ’ ಧರ್ಮಣ್ಣ ಸಿದ್ದಪ್ಪ ನಾಯಿಕರು ಮೃದು ಮಾತಿನ ಹೂಹೃದಯದ ಸಜ್ಜನ ಶಕ್ತಿಕೇಂದ್ರವಾಗಿದ್ದಾರೆ.ಬಡವರˌಶೋಷಿತರˌನೊಂದವರ ಧ್ವನಿಯಾಗಿ ಸಮಾಜದ ಸಂಪತ್ತಾಗಿದ್ದಾರೆ.ಜನರ ನಡುವಿನಿಂದ ಅರಳಿದ ಅಸಲಿ ನಾಯಕ ನಾಯಿಕರವರು ಅಜಾತ ಶತ್ರುಗಳಾಗಿ ಧರ್ಮಣ್ಣ ಹೆಸರಿಗೆ ಅನ್ವರ್ಥಕರಾಗಿದ್ದಾರೆ.
ಅಮೃತದ ಅಕ್ಷಯ ಕುಂಭವಾಗಿರುವ ಡಿ.ಎಸ್.ನಾಯಿಕರವರು ನಡೆದಾಡುವ ಭಾವೈಕ್ಯದ ಬಾವುಟವಾಗಿದ್ದಾರೆ.ಸಮಾಜದ ಕೆಲಸಗಳಿಗೆ ಸದಾ ಮುಂದಾಗುವ ಮುಂದಾಳು ಧರ್ಮಣ್ಣ ನಾಯಿಕರು ನಾಯಕರ ನಾಯಕ ಮಹಾನಾಯಕರಾಗಿ ಕಂಗೊಳಿಸುತ್ತಿದ್ದಾರೆ.ಅವರು ನಡೆದು ಬಂದ ಧರ್ಮಪಥ ಎಲ್ಲರಿಗೂ ಮಾದರಿ.ಧರ್ಮದಾರಿಯ ಚತುಷ್ಪಥವೆನಿಸಿದ ಇವರು ಯುವಕರಿಗೆ ದಾರಿದೀಪವಾಗಿದ್ದಾರೆ.ಆರೋಗ್ಯಕರ ಸಮಾಜದ ನಿರ್ಮಾಪಕ ಡಿ.ಎಸ್.ನಾಯಿಕರವರು ಮೌಲ್ಯಗಳ ಮಹಾ ಉಪಾಸಕರುˌಸಾಹಿತ್ಯಾರಾಧಕರುˌಸಂಸ್ಕೃತಿ ಅರ್ಚಕರಾಗಿ ರಾಯಬಾಗದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ.ಅವರಿಗೆ ಪರಮಾನಂದವಾಡಿಯಲ್ಲಿ ಜರುಗಲಿರುವ ರಾಯಬಾಗ ತಾಲೂಕಾ ಆರನೆಯ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷ ಪದವಿ ಅರಸಿ ಬಂದಿರುವುದು ತಾಲೂಕಿನಾದ್ಯಂತ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಎಲ್ಲೆಡೆ ಸಂತಸ ಗೂಡು ಕಟ್ಟಿದೆ.ಆನಂದದ ಅಲೆಗಳು ಕನ್ನಡ ಕಸ್ತೂರಿಯ ಪರಿಮಳ ಆಸ್ವಾದಿಸಲು ತುದಿಗಾಲ ಮೇಲೆ ನಿಂತಿರುವುದು ಸರ್ವವೇದ್ಯ .ಮೊರಬದ ಮೊಹರು ಡಿ.ಎಸ್.ನಾಯಿಕರವರ ನಿರ್ಮಲ ಚಿತ್ತˌಸಮಾಜ ಕಳಕಳಿˌಬಹುಮುಖ ಕಾಯಕಕ್ಕೆ ರಾಯಬಾಗ ತಾಲೂಕಾ 6 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟದ ಗೌರವ ದೊರಕಿದೆ .
ಅವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು.
:- ರವೀಂದ್ರ ಮ ಪಾಟೀಲ
ಅಧ್ಯಕ್ಷರುˌಕ.ಸಾ.ಪˌರಾಯಬಾಗ
by Gadi Nudi | Jan 19, 2023 | Home Page - Highlights ( Red Background ), Uncategorized
ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳು
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.
ವಿಜಯಪುರದಲ್ಲಿ ನಡೆಯುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿಗಳ ವಿವರ:
೧.ಜಿ.ನಾರಾಯಣ ಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ):
ಮಂಜುನಾಥ ಜೂಟಿ, ವಿಜಯ ಕರ್ನಾಟಕ, ಕಲಬುರಗಿ
ಕಲಾವತಿ ಬೈಚಬಾಳ, ಪ್ರಜಾವಾಣಿ, ಧಾರವಾಡ.
೨.ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ): ವೈ.ಗ.ಜಗದೀಶ್, ಪ್ರಜಾವಾಣಿ, ಬೆಂಗಳೂರು.
ಕೂಡ್ಲಿ ಗುರುರಾಜ್, ಉದಯವಾಣಿ, ಮೈಸೂರು.
೩.ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ):
ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ.
ಜಿ.ವಿ.ಸುಬ್ಬರಾವ್, ಬಳ್ಳಾರಿ ಬೆಳಗಾಯಿತು ಪತ್ರಿಕೆ, ವಿಜಯನಗರ ಜಿಲ್ಲೆ.
೪.ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
ವಿಜಯಲಕ್ಷ್ಮಿ ಶಿಬರೂರು, ವಿಜಯ ಟೈಮ್ಸ್, ಬೆಂಗಳೂರು.
ಎಲ್.ಎಸ್.ಶ್ರೀಕಾಂತ್, ಕನ್ನಡಪ್ರಭ, ಮೈಸೂರು.
೫.ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ):
ಇಬ್ರಾಹಿಂ ಖಲೀಬ್, ಸುದ್ದಿ ಬಿಡುಗಡೆ, ಪುತ್ತೂರು.
ಎಚ್.ಟಿ.ಪ್ರಸನ್ನ, ಪೊಲೀಸ್ ಬೇಟೆ, ಹಿರಿಯೂರು.
೬.ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ (ವಾರಪತ್ರಿಕೆ ವಿಭಾಗ).
ಡಾ.ಯು.ಬಿ.ರಾಜಲಕ್ಷ್ಮಿ, ಸಂಪಾದಕರು, ತರಂಗ, ಮಣಿಪಾಲ್.
ಶ್ರಿಮತಿ ಎಚ್.ಜಿ.ಶೋಭ, ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ
೭.ನೆಟ್ಟಕಲ್ಲಪ್ಪ ಪ್ರಶಸ್ತಿ, (ಅತ್ಯುತ್ತಮ ಕ್ರೀಡಾ ವರದಿ)
ಅವಿನಾಶ್ ಜೈನಹಳ್ಳಿ, ವಿಜಯವಾಣಿ, ಮೈಸೂರು.
ಸ್ಪಂದನ್ ಕೆ. ಕನ್ನಡ ಪ್ರಭ, ಬೆಂಗಳೂರು.
೮.ಬಂಡಾಪುರ ಮುನಿರಾಜು ಪ್ರಶಸ್ತಿ (ಅತ್ಯುತ್ತಮ ಸುದ್ದಿ ಚಿತ್ರ):
ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಸ್ಟಾರ್ ಆಫ್ ಮೈಸೂರು.
ಕೆ.ಎಸ್.ಶ್ರೀಧರ್, ವಿಜಯ ಕರ್ನಾಟಕ.
ಆರ್.ನಾಗರಾಜ್, ತುಮಕೂರು.
೯.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ವರದಿಗೆ): ಎಸ್.ಎಸ್.ಸಚ್ಛಿತ್, ಹುಣಸೂರು.
ಶ್ರೀನಿವಾಸ.ಪಿ.ಎ., ಹಾಸನ.
೧೦.ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಅತ್ಯುತ್ತಮ ವರದಿಗೆ):
ನಿರಂಜನ ಕಗ್ಗೆರೆ, ಟೈಮ್ಸ್ ಆಫ್ ಇಂಡಿಯಾ.
ಇಮ್ರಾನ್ ವುಲ್ಲಾ, ಪಾವಗಡ, ತುಮಕೂರು.
ಗುರುದತ್ ಭಟ್, ವಿಜಯ ಕರ್ನಾಟಕ, ಬೆಳಗಾವಿ.
೧೧.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ): ಕೆ.ಬಿ.ಜಗದೀಶ್ ಜೇಡುಬೀಟೆ, ಗೋಣಿಕೊಪ್ಪ, ಕೊಡಗು.
ಅಶೋಕ ಸಾಲವಡಗಿ, ಪ್ರಜಾವಾಣಿ, ಯಾದಗಿರಿ.
ಕೆ.ಎಸ್.ಸೋಮಶೇಖರ, ಇಂದುಸಂಜೆ, ಬೆಂಗಳೂರು.
೧೨.ಮಂಡಿಬೆಲೆ ಶಾಮಣ್ಣ ಪ್ರಶಸ್ತಿ (ಗ್ರಾಮೀಣ ವಿಭಾಗ)
ಎಚ್.ಆರ್.ದೇವರಾಜ್, ಕಡೂರು, ಚಿಕ್ಕಮಗಳೂರು ಜಿಲ್ಲೆ. ರಾಘವೇಂದ್ರ ವೆಂಕಟರಾವ್ ಗುಮಾಸ್ತೆ, ಸಂಯುಕ್ತ ಕರ್ನಾಟಕ, ಮುದಗಲ್. ರಾಯಚೂರು ಜಿಲ್ಲೆ. ಸದಾಶಿವ ರಾಮಪ್ಪ ಬಡಿಗೇರ, ರಾಯಬಾಗ, ಬೆಳಗಾವಿ ಜಿಲ್ಲೆ.
೧೩. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ:
ಎನ್.ಬಿ.ನಾರಾಯಣ, ಮಂಗಳ ಪತ್ರಿಕೆ
ಆರ್.ಜಿ.ಹಳ್ಳಿ ನಾಗರಾಜ್, ಬೆಂಗಳೂರು. ಗಂಗಾಧರ ಕುಷ್ಟಗಿ, ಲಂಕೇಶ್ ಪತ್ರಿಕೆ.
ಪುಟ್ಟಸ್ವಾಮರಾಧ್ಯ, ಬೆಂಗಳೂರು.
೧೪.ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ):
ರಾಜು ಖಾರ್ವಿ, ಉದಯವಾಣಿ, ಬೆಂಗಳೂರು.
ಕೆ.ಪ್ರಕಾಶ್, ವಿಜಯ ಕರ್ನಾಟಕ, ಮುಳಬಾಗಿಲು.
೧೫.ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ಲೇಖನ)
ಬಿ.ಎನ್.ಮಲ್ಲೇಶ್, ನಗರವಾಣಿ, ದಾವಣಗೆರೆ.
ಪಿ.ಎಸ್.ಗುರು, ಪ್ರಜಾವಾಣಿ.
೧೬.ಅತ್ಯುತ್ತಮ ಪುಟ ವಿನ್ಯಾಸಗಾರರು: ಹರೀಶ್ ಕುಮಾರ್. ಆರ್. ವಿಜಯವಾಣಿ.
ಎಸ್.ಆರ್.ರೋಹಿತ್, ನಾವಿಕ ಪತ್ರಿಕೆ, ಶಿವಮೊಗ್ಗ.
೧೭.ನ್ಯಾಯಾಲಯ ವಿಭಾಗ:
ಪಿ.ರಾಜೇಂದ್ರ, ಹೊಸದಿಗಂತ.
ಜಗನ್ .ಆರ್., ವಿಜಯವಾಣಿ
೧೮.ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಅತ್ಯುತ್ತಮ ವರದಿ): ಪಿ.ಪಿ.ಕಾಳಯ್ಯ, ಶಕ್ತಿ ದಿನಪತ್ರಿಕೆ, ಕೊಡಗು.
ಬಸವರಾಜ ಭೋಗಾವತಿ, ಮಾನ್ವಿ, ಪ್ರಜಾವಾಣಿ, ರಾಯಚೂರು.
by Gadi Nudi | Nov 11, 2021 | Top ಸುದ್ದಿಗಳು, Uncategorized
ಜೆಡಿಎಸ್ ನಿಂದ ಜನತಾ ಪತ್ರಿಕೆ ಲೋಕಾರ್ಪಣೆ
ಜನತಾ ಪತ್ರಿಕೆ ಕನ್ನಡಿಗರ ಮುಖವಾಣಿ ಎಂದರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ.
*
ಬೆಂಗಳೂರು: ಜನತಾ ಪತ್ರಿಕೆ ಜೆಡಿಎಸ್ ಪಕ್ಷದ ಮುಖವಾಣಿ ಅಲ್ಲ. ಸಮಸ್ತ ಕನ್ನಡಿಗರ ಮುಖವಾಣಿ. ಕೃಷಿ ಕಾರ್ಮಿಕರು ಮತ್ತು ಶ್ರಮಿಕರ ಮುಖವಾಣಿ ಆಗಿ ಕೆಲಸ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೇಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ ಸಂಘಟನಾ ಕಾರ್ಯಗಾರ ‘ ಜನತಾ ಸಂಗಮ ‘ ಕಾರ್ಯಕ್ರಮದಲ್ಲಿ ಇಂದು ನಡೆದ ‘ಜನತಾ ಪತ್ರಿಕೆ ‘ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯದ, ದೇಶದ ಬೆಳವಣಿಗೆಗಳ ಬಗ್ಗೆ ಈ ಪತ್ರಿಕೆಯಲ್ಲಿ ವಿಶ್ಲೇಷಣೆ ಇರುತ್ತದೆ. ನಾಡಿನ ಹಿತದೃಷ್ಟಿಯಿಂದ ಜನರಿಗೆ ಬದ್ಧವಾಗಿ ಪತ್ರಿಕೆಯನ್ನು ರೂಪಿಸಲಾಗುವುದು ಎಂದು ಹೆಚ್ ಡಿಕೆ ಅವರು ಹೇಳಿದರು.
ಬೇರೆ ರಾಜ್ಯದಲ್ಲಿ ಹಲವಾರು ಪಕ್ಷಗಳ ಅವರದ್ದೇ ಆದ ಪಕ್ಷದ ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅವರದ್ದೇ ಆದ ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪತ್ರಿಕೆ ಲೋಕಾರ್ಪಣೆ ಆಗುತ್ತಿದೆ. ಯಾವುದೇ ಕಾರಣಕ್ಕೂ ‘ ಜನತಾ ಪತ್ರಿಕೆ ‘ ಪಕ್ಷದ ಮುಖವಾಣಿ ಆಗೋದಿಲ್ಲ ಎಂದು ಕುಮಾರಸ್ವಾಮಿ ಅವರು ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ಹಿಂದು ರಾಮಯ್ಯ ಅವರು ವರದಿಗಾರರಾಗಿದ್ದರು. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರು. ಅಂತವರಿಂದ ಪತ್ರಿಕೆ ಲೋಕಾರ್ಪಣೆ ಆಗಿದ್ದು ಸಂತಸ ಉಂಟು ಮಾಡಿದೆ ಎಂದು ಅವರು ಹೇಳಿದರು.
ಗೌಡರ ಶುಭ ಹಾರೈಕೆ:
ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು; “ಪತ್ರಿಕೆಯನ್ನು ಹೊರತರುತ್ತಿರುವ ವಿಚಾರ ಒಳ್ಳೆಯದೇ. ಈ ಪತ್ರಿಕೆಯಿಂದ ನಾಡಿನ ಜನತೆಗೆ ಒಳ್ಳೆಯದಾಗಲಿ” ಎಂದು ಹಾರೈಸಿದರು.
ನಮ್ಮ ಪಕ್ಷದಲ್ಲಿ ಸಮರ್ಥ ನಿಷ್ಟೆ ಇರುವ ನಾಯಕರು ಕಾರ್ಯಕರ್ತರು ಇದ್ದಾರೆ. ಅವರೆಲ್ಲರ ಮನೆ ಬಾಗಿಲಿಗೆ ಈ ಪತ್ರಿಕೆ ಮುಟ್ಟಬೇಕು. ಪತ್ರಿಕೆ ಚೆನ್ನಾಗಿ ಬೆಳೆಯುತ್ತದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ಜನರಿಗೆ ಮುಟ್ಟಲಿ:
ಜನತಾ ಪತ್ರಿಕೆ ಬಿಡುಗಡೆ ಮಾತನಾಡಿದ ಪಿ. ರಾಮಯ್ಯ ಅವರು; ಇದು ಪಕ್ಷದ ಮುಖವಾಣಿಯಲ್ಲ. ಜನ ಸಾಮಾನ್ಯರ ಪತ್ರಿಕೆ ಆಗಿ ಮೂಡಿಬರಲಿದೆ. ಪತ್ರಿಕೆ ಜನ ಸಾಮಾನ್ಯರಿಗೆ ತಲುಪಬೇಕು. ಇದು ಪಾರ್ಟಿಯ ಮುಖವಾಣಿಯಲ್ಲ ನನಗೆ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಗಾಗಿ ನಾನು ಇಂದು ಈ ಪತ್ರಿಕೆ ಲೋಕಾರ್ಪಣೆಗೆ ಬಂದೆ. ಈಗ ಪತ್ರಿಕೆ ನಡೆಸೋದು ಅಷ್ಟು ಸುಲಭದ ಹಾದಿಯಲ್ಲ. ಎಲ್ಲವನ್ನೂ ದಾಟಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಎರಡನೇ ಹಂತದ ಕಾರ್ಯಾಗಾರ:
ಈಗಾಗಲೇ ಬಿಡದಿಯಲ್ಲಿ ಏಳು ದಿನಗಳ ಕಾರ್ಯಗಾರವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಎಂಟು ದಿನಗಳ ಕಾರ್ಯಗಾರ ನಡೆಯಲಿದೆ. ಇಂದಿನಿಂದ ನಿರಂತರವಾಗಿ ಪದಾಧಿಕಾರಿಗಳ ಸಭೆಗಳು ಆರಂಭವಾಗುತ್ತಿವೆ. ಪಕ್ಷ ಸಂಘಟನೆ ಹಾಗೂ ಮುಂದಿನ ಎಲ್ಲಾ ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುತ್ತದೆ ಎಂದು ಎಂದು ಅವರು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಮೊದಲಿಗೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ನಾಯಕರೂ, ಶಾಸಕರು ಮುಂತಾದವರು ಹಾಜರಿದ್ದರು.
by Gadi Nudi | Nov 4, 2021 | Uncategorized, ಕನ್ನಡ ನಾಡು ನುಡಿ
ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ : ಬೊಮ್ಮಾಯಿ
ಮುಂದಿನ ವರ್ಷದಿಂದ ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ
ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ :
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಬೆಂಗಳೂರು: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ
ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸಿದರು.
ಅವರು ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ – 2021ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.
ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಎ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮೀತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರ ನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ.
ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇನ್ನು ಮುಂದೆ ಯಾರೂ ಬಯೋ ಡೇಟಾ ತಯಾರು ಮಾಡಬೇಕಾದ, ಪತ್ರಿಕಾ ತುಣುಕುಗಳನ್ನು ಜೋಡಿಸಿತಟ್ಟು ತೋರಿಸುವ ಅಗತ್ಯವಿಲ್ಲ ಎಂದು ಪ್ರಶಸ್ತಿ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದ್ದದ್ದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾಡದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು.
ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ ಮನಸ್ಸು ಒಳ್ಳೆಯದಿರಬೇಕು. ಪೌರಕಾರ್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದ ಅಲ್ಲ ಎಂದರು.
ಪ್ರತಿಭೆಗೆ ವಯಸ್ಸಿನ ಗಡಿ ಮಿತಿಗಳಿಲ್ಲ: 60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ ಮಕ್ಕಳು ಎಷ್ಟೊಂದು ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ. ಕನ್ನಡ ನಾಡಿನಲ್ಲಿ ಎಷ್ಟು ನೀರಜ್ ಛೋಪ್ರಾ ಒಬ್ಬರಿಗೆ ಒಲಂಪಿಕ್ಸ್ ಚಿನ್ನದ ಪದಕ ದೊರೆತಿರುವುದು ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದರು.
ಹಿರಿಯರ ಜೊತೆಗೆ ವಿಶೇಷ ಪ್ರತಿಭೆಗಳನ್ನು ಗುರುತಿಸಲಾಗುವುದು ಎಂದರು.
ಕಂದಾಯ ಸಚಿವ ಆರ್ ಅಶೋಕ್,
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.