ಡಾ ಕಾಂತರಾಜ್ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಆಯೋಗಕ್ಕೆ ಒತ್ತಾಯ.
ಬೆಂಗಳೂರು- 20, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ರವರ ನೇತೃತ್ವದ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿಯ ಪೂರ್ಣ ವಿವರ.
ರಾಷ್ಟ್ರದಲ್ಲಿ ಮೀಸಲಾತಿಯನ್ನು ಅವಕಾಶ ವಂಚಿತ ಜಾತಿಗಳಿಗೆ ನೀಡಿ ಸಾಮಾಜಿಕ ಸಮಾನತೆಯನ್ನು ಸಾರಿದ ಅಗ್ರಗಣ್ಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸಿ ಅನೇಕ ಜಾತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕರ್ನಾಟಕದಲ್ಲಿ ಅನೇಕ ಯಶಸ್ವಿ ಪ್ರಯೋಗಗಳು ನಡೆದಿವೆ. ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ ಮೀಸಲಾತಿಯನ್ನು ಅಚ್ಚುಕಟ್ಟಾಗಿ ಜಾರಿ ಮಾಡಿದ್ದರೂ ರಾಜಕೀಯ ತೀರ್ಮಾನಗಳಿಂದಾಗಿ ಬಲಾಡ್ಯರು ಮೀಸಲಾತಿ ಪಡೆದು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಷನೀಯ.
ಕರ್ನಾಟಕ ರಾಜ್ಯದಲ್ಲಿ ಹಾವನೂರು ಆಯೋಗದ ವರದಿ 1975 ರ ಪ್ರಕಾರ ಸರ್ಕಾರದ ಆದೇಶದಂತೆ ಎಸ್.ಡಬ್ಲೂö.ಎಲ್.12 ಟಿ.ಬಿ.ಎಸ್.77, ಬೆಂಗಳೂರು ದಿನಾಂಕ:22-02-1977 ಪ್ರಕಾರ ಹಿಂದುಳಿದ ವರ್ಗಗಳಿಗೆ ಶೇ40% ರಷ್ಟು ಮೀಸಲಾತಿಯನ್ನು ಇಡಲಾಗಿತ್ತು. ತದ ನಂತರ ಸುಪ್ರಿಮ್ ಕೋರ್ಟಿನ ಆದೇಶದ ಪ್ರಕಾರ ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ವರದಿ ತಯಾರು ಮಾಡಲು ಕರ್ನಾಟಕ ರಾಜ್ಯದಲ್ಲೂ ಸಹ ಟಿ.ವೆಂಕಟಸ್ವಾಮಿ ಆಯೋಗ 1983 ರಲ್ಲಿ ರಚನೆಯಾಯಿತು. ಈ ಆಯೋಗವು 1986 ರಲ್ಲಿ ತನ್ನ ಸಂಪೂರ್ಣ ವರದಿಯನ್ನು ಸಲ್ಲಿಸಿತು. ಆದರೆ ಸರ್ಕಾರವು ವರದಿಯನ್ನು ಸ್ವೀಕರಿಸಲಿಲ್ಲ. ಸರ್ಕಾರವು ಮತ್ತೇ ಹೊಸದಾಗಿ ಅದೇ ವರ್ಷದಲ್ಲಿ ಅಂದರೆ 1986 ರಲ್ಲಿ ಓ.ಚೆನ್ನಪ್ಪ ರೆಡ್ಡಿ ರವರ ಮತ್ತೊಂದು ಆಯೋಗವನ್ನು ರಚನೆ ಮಾಡಿತು. ಈ ಆಯೋಗವು ಕಾರ್ಯನಿರತರಾಗಿ ವರದಿ ಸಂಪೂರ್ಣಗೊಂಡು ನೀಡುವಷ್ಟರಲ್ಲಿ ಬಹಳಷ್ಟು ಮುಂದುವರೆದ ಜಾತಿಗಳನ್ನು ಅಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆದಿರುವ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಯಿತು. ಹಾಗೇಯೆ 1986 ರಲ್ಲಿ ಆಯೋಗದ ವರದಿ ಹೊರ ಬಿದ್ದಿತು. ಅದರಲ್ಲಿ ಮೇಲೆ ಹೇಳಿದ ಮುಂದುವರೆದ ಜಾತಿಗಳು ಎಂದು ಘೋಷಿಸಿದ್ದರೂ ಕೂಡ ಸರ್ಕಾರ ಯಾವುದೇ ಬದಲಾವಣೆ ಮಾಡದೆ ಮತ್ತೋಂದು ಸರ್ಕಾರಿ ಆದೇಶ ಹೊರಡಿಸಿತ್ತು. (ಇತರೆ ಮುಂದುವರೆದ ಮೇಲ್ಕಂಡ ಜಾತಿಗಳನ್ನು ಸೇರಿಸಲಾಯಿತು) ಆದೇಶ ಸಂಖ್ಯೆ:ಎಸ್.ಡಬ್ಲೂ. ಎಲ್. 66 ಬಿ.ಸಿ.ಎ.86 ಬೆಂಗಳೂರು. ದಿನಾಂಕ:13-10-1986. ಈ ವರದಿಯನ್ನು 1990 ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಸರ್ಕಾರ ಈ ವರದಿಯನ್ನು ಸ್ವೀಕರಿಸಿ ಈ ಮೂಲಕ ಸರ್ಕಾರ ಆದೇಶಗಳಿಗೆ ಅನುಗುಣವಾಗಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ/ ಮತ್ತು ಇತರೆ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಪ್ರಕಾರ ಭಾರತದ ಸಂವಿದಾನದ ಅನುಚ್ಚೇದ 15(4) ರಂತೆ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಚೇದ 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಗಳು ಆದೇಶ ಕುರಿತು ಅಧಿಕೃತ ಆದೇಶ ಹೊರಡಿಸಿತು. ತದ ನಂತರ ಸುಪ್ರಿಂಕೊರ್ಟಿನಲ್ಲಿ 1992 ರಲ್ಲಿ ಇಂದಿರ ಸಹಾನಿ ಕೇಸಿನ ವಿಚಾರಣೆಯಲ್ಲಿ 9 ಸದಸ್ಯರ ನ್ಯಾಯಮೂರ್ತಿಗಳ ಪೀಠವು ಪ್ಯಾರ 847 ರಲ್ಲಿ ಇದೆ. ಆದೇಶದಲ್ಲಿ ಸುಪ್ರಿಂಕೊರ್ಟ್ ದೇಶದ ಎಲ್ಲಾ ರಾಜ್ಯಗಳಿಗೆ ತಮ್ಮದೇ ಆದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಲು ನಿರ್ದೇಶನ ನೀಡಲಾಯಿತು. ಅದೇ ಪ್ರಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995 ಜಾರಿಗೆ ಬಂತು. ಅದರ ಪ್ರಕಾರ ಅಂದಿನ ಸರ್ಕಾರವು ಪ್ರೋ.ರವಿವರ್ಮ ಕುಮಾರ್ ರವರ ಮೊದಲ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿತು. ಈ ಆಯೋಗವು ಕಾರ್ಯ ನಿರ್ವಹಿಸಿ 2000 ನೇ ಇಸವಿಯಲ್ಲಿ ತಮ್ಮ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಸರ್ಕಾರವು ಸಹ ಅದನ್ನು ಒಪ್ಪಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸರ್ಕಾರಿ ಆದೇಶ ಸಂಖ್ಯೆ ಎಸ್.ಡಬ್ಲೂ.ಡಿ. 225 ಬಿ.ಸಿ.ಎ. 2000 ಬೆಂಗಳೂರು. ದಿನಾಂಕ:30-03-2002 ರ ಅನ್ವಯ ಪರಿಷ್ಕರಣೆ ಮಾಡಿ ಸರ್ಕಾರಿ ಆದೇಶ ಹೊರಡಿಸಿತು. ತದ ನಂತರ 2002ರ ನಂತರ ಯಾವುದೇ ಆಯೋಗದ ವರದಿಯನ್ನು ಪರಿಗಣಿಸಿ ಮರು ಪರಿಷ್ಕರಣೆ ಮಾಡಿರುವುದಿಲ್ಲ. ಮೇಲ್ಕಂಡ 1995ರ ಸೆಕ್ಷನ್ 11ರ ಪ್ರಕಾರ ಮೇಲ್ಕಂಡAತೆ ಸರ್ಕಾರವು ಪ್ರತಿ 10 ವರ್ಷಕೊಮ್ಮೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಹಿಂದುಳಿದ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಆರ್ಥಿಕ ಮತ್ತು ಎಲ್ಲಾ ರೀತಿಯಿಂದಲೂ ಅವರ ಹಿಂದುಳಿದಿರುವಿಕೆಯ ಗುಣಲಕ್ಷಣಗಳ ಬಗ್ಗೆ ಸಂಪೂರ್ಣ ಅಧ್ಯಯನವನ್ನು ನಡೆಸಿ ಸಂವಿಧಾನದ 15 ಮತ್ತು 16 ಹಾಗೂ 340ನೇ ವಿಧಿಗಳಿಗೆ ಅನುಸಾರ ಅರ್ಹರಾಗಿ ಇರುವವರ ವಿಧಿ ವಿಧಾನಗಳ ಪ್ರಕಾರ ದತ್ತಾಂಶಗಳ ವರದಿಯನ್ನು ಪಡೆದು ಹಿಂದುಳಿದ ವರ್ಗಗಳ ಪರಿಷ್ಕುçತ ಪಟ್ಟಿ ಮಾಡಿ ಆದೇಶ ಹೊರಡಿಸುವುದು ಸರ್ಕಾರದ ಆದ್ಯ ಕರ್ತವ್ಯ ಇದ್ದರೂ ಸರ್ಕಾರವು ಇದನ್ನು ಲೆಕ್ಕಿಸದೇ ಕೆಲವು ಮುಂದುವರೆದ ಪ್ರಬಲ ಜಾತಿಗಳ ಕೂಗಿಗೆ ಒಗೂಟ್ಟು ಆ ಜಾತಿಗಳ ಓಲೈಕೆಗಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ವಾಸ್ತವವಾಗಿ, ಪ್ರಮಾಣಿಕವಾಗಿ, ಎಲ್ಲಾ ರೀತಿಯಿಂದಲೂ ಹಿಂದಿಳಿರುವಿಕೆಯ ಗುಣಲಕ್ಷಣಗಳುಳ್ಳ ಹಿಂದುಳಿದ ವರ್ಗಗಳ ಏಳಿಗೆಗೆ ಸರ್ಕಾರವು ಕುತ್ತು ತಂದAತಾಗಿ ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯವಾಗಿರುತ್ತದೆ.
ಈ ಮೇಲಿನ ಎಲ್ಲಾ ವಿಷಯಗಳನ್ನು ಸರ್ಕಾರವು ಕುಲಂಕುಷವಾಗಿ ಪರಿಶೀಲಿಸಿ ಸಾಮಾಜಿಕ ನ್ಯಾಯ ಸೂತ್ರದಡಿ ಮತ್ತು ಅಸಮಾತೋಲನ ಉಂಟಾಗುವ ಅಪಾಯವನ್ನು ತಪ್ಪಿಸುವ ದೃಷ್ಠಿಯಿಂದ ಈಗಾಗಲೇ ಸಿದ್ದವಾಗಿರುವ ನ್ಯಾಯವಾದಿ ಕಾಂತರಾಜು ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ತಮ್ಮ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ನೀಡಿ ರಾಜ್ಯ ಸರ್ಕಾರವು ವರದಿಯನ್ನು ಸ್ವೀಕರಿಸಿ ಕಳೆದ 20 ವರ್ಷಗಳಿಂದ ಹಿಂದುಳಿದ ವರ್ಗಗಳ ಪರಿಷ್ಕುçತ ಪಟ್ಟಿಯನ್ನು ಪರಿಷ್ಕರಣೆ ಮಾಡದೆ ಇರುವ ಕಾರಣ ಮತ್ತೊಮ್ಮೆ ಪರಿಷ್ಕರಣೆ ಮಾಡಿ ವರದಿ ಬಿಡುಗಡೆಗೊಳಿಸಿ ಅದನ್ನು ಅಂಗೀಕರಿಸಿ ಶೀಘ್ರ ಜಾರಿಗೆ ತರಬೇಕು ಇಲ್ಲವಾದಲ್ಲಿ ನಮ್ಮ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಮೇಲ್ಕಂಡ ವಿಷಯಗಳ ಬಗ್ಗೆ ಒತ್ತಾಯವನ್ನು ಮಾಡುತ್ತದೆ. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಅವಶ್ಯವಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಲಿದೆ. ಎಂದು ತಮ್ಮ ಗಮನಕ್ಕೆ ತರಲು ನಮ್ಮ ಒಕ್ಕೂಟವು ಬಯಸುತ್ತದೆ.