ನಮ್ಮ ಸಾಧನೆಯನ್ನು ಯಾರಾದರೂ ಗುರುತಿಸಿದಾಗ ಮತ್ತಷ್ಟು ಸಾಧಿಸುವ ಛಲ ಬರುತ್ತದೆ
ಶಿಕ್ಷಣ ನಮ್ಮನ್ನು ಶೋಷಣೆಯಿಂದ ತಪ್ಪಿಸುತ್ತದೆ
ವಿದ್ಯಾರ್ಥಿ ಜೀವನದಲ್ಲೇ ನಾವು ನಮ್ಮ ಮಾದರಿ ವ್ಯಕ್ತಿತ್ವಗಳನ್ನು ಆರಿಸಿಕೊಳ್ಳಬೇಕು: ವಿದ್ಯಾರ್ಥಿಗಳಿಗೆ ಕೆ.ವಿ.ಪ್ರಭಾಕರ್ ಕರೆ
ಕೋಲಾರ ಅ 8: ವಿದ್ಯಾರ್ಥಿ ಜೀವನದಲ್ಲೇ ನಾವು ನಮ್ಮ ಮಾದರಿ ವ್ಯಕ್ತಿತ್ವಗಳನ್ನು ಆರಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಕನಕ ನೌಕರರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಮಾತನಾಡಿದರು.
ನಮಗೆ ಶಿಕ್ಷಣ ದಾಸೋಹಿ ಅಹಲ್ಯಾ ಬಾಯಿ ಹೋಳ್ಕರ್, ದಾಸಶ್ರೇಷ್ಠ ಕನಕದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರುಗಳು ನಮಗೆ ಮಾದರಿ ಆಗಬೇಕು. ಇಡೀ ಸಮಾಜ ಜಾತಿ-ಧರ್ಮದ ಬೇಧವಿಲ್ಲದೆ ಇಂಥ ಮಹನೀಯರನ್ನು ಮಾದರಿಯಾಗಿ ಸ್ವೀಕರಿಸಿದೆ. ನಾವು ಈ ಚಾರಿತ್ರಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತಂತ್ರಜ್ಞಾನ ನಮ್ಮ ತಿಳಿವಳಿಕೆಯನ್ನು, ಜ್ಞಾನವನ್ನು ವಿಸ್ತರಿಸುವಂತಿರಬೇಕು. ಮೊಬೈಲ್ ಮತ್ತಿತರ ತಂತ್ರಜ್ಞಾನವನ್ನು ಇವುಗಳ ಸಾಧ್ಯತೆಗಳನ್ನು ನಮ್ಮ ತಿಳಿವಳಿಕೆ ಮತ್ತು ವಿಚಾರವಂತಿಕೆಯನ್ನು ಹಾಳುಮಾಡಲು ಬಳಸಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಮಕ್ಕಳು ಸಮಾಜದಲ್ಲಿ ಎದೆ ಎತ್ತಿ ನಿಲ್ಲಬೇಕು ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಯ ಕನಸಾಗಿರುತ್ತದೆ. ಇದಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಓದಿಸುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ತಂದೆ ತಾಯಿಯರ ಕಣ್ಣಲ್ಲಿ ನೀರು ಹಾಕುತ್ತಾರೆ. ಇದನ್ನೆಲ್ಲಾ ಮಕ್ಕಳು ಗಮನಿಸಬೇಕು. ಜವಾಬ್ದಾರಿಯುತವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಮೈಸೂರು ಕಾಗಿನೆಲೆ ಶ್ರೀ ಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಪುರಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕನಕ ನೌಕರರ ಸಂಘದ ಅಧ್ಯಕ್ಷರಾದ ಬಿ.ಎಂ.ನಾರಾಯಣಸ್ವಾಮಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ವಿವಿಯ ಉಪ ಕುಲಪತಿಗಳೂ , ಸಮಾಜದ ಹಿರಿಯರೂ ಆದ ಬಿ.ಕೆ.ರವಿ ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.