ಪಿಟಿಐ ನ ಅಧ್ಯಕ್ಷರಾಗಿ ಕೆ ಎನ್ ಶಾಂತಕುಮಾರ್ ಆಯ್ಕೆ
ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಪ್ರಕಾಶನ ಸಂಸ್ಥೆಯಾಗಿರುವ ದಿ ಪ್ರಿಂಟರ್ಸ್ (ಮೈಸೂರ) ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿರುವ ಶ್ರೀ ಕೆ ಎನ್ ಶಾಂತಕುಮಾರ್ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸುದ್ದಿ ಸಂಸ್ಥೆಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಶುಕ್ರವಾರ ಆಯ್ಕೆಯಾಗಿದ್ದಾರೆ.
ಸುದ್ದಿ ಸಂಸ್ಥೆಯ ವಾರ್ಷಿಕ ಮಹಾಸಭೆಯ ನಂತರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಹಿಂದೂಸ್ಥಾನ ಟೈಮ್ಸ್ ನ ಸಿಇಒ ಪ್ರವೀಣ ಸೋಮೇಶ್ವರ ಅವರು ಪಿಟಿಐ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಿಟಿಐ ನಿರ್ದೇಶಕರ ಮಂಡಳಿಯ ಇತರೆ ಸದಸ್ಯರು, ವಿಜಯಕುಮಾರ್ ಚೋಪ್ರಾ(ಪಂಜಾಬ್ ಕೇಸರಿ) ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾ) ಎನ್ ರವಿ ( ದಿ ಹಿಂದೂ) ವಿವೇಕ್ ಗೋಯಂಕಾ (ಎಕ್ಸ್ ಪ್ರೆಸ್ ಸಮೂಹ) ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ) ರಿಯಾದ್ ಮ್ಯಾಥ್ಯೂ (ಮಲಯಾಳಂ ಮನೋರಮ) ಎಂ ವಿ ಶ್ರೇಯಾಂಸ್ ಕುಮಾರ್ (ಮಾತೃಭೂಮಿ) .
ಎಲ್ ಆದಿಮೂಲಮ್ (ದಿನಮಲಾರ್) ಹೋರ್ಮುಸ್ವೀ ಎಮ್ ಕಾಮಾ ( ಬಾಂಬೆ ಸಮಾಚಾರ್) ಹಿರಿಯ ಅರ್ಥ ಶಾಸ್ತ್ರಜ್ಞ ಪ್ರೊ ದೀಪಕ್ ನೈಯರ್, ಮಾಜಿ ವಿದೇಶಾಂಗ ಕಾರ್ಯದರ್ಶಿಶಿವಶಂಕರ್ ಮೆನನ್ ಹಿರಿಯ ಪತ್ರಕರ್ತ ಟಿ ಎನ್ ನೈನನ್ ಮತ್ತು ಟಾಟಾ ಸನ್ಸನ ಮಾಜಿ ಕಾರ್ಯನಿರ್ವಾಹ ನಿರ್ದೇಶಕ ಆರ್ ಗೋಪಾಲಕೃಷ್ಣನ್